ಹೊಸಪೇಟೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶನಿವಾರ ತಡರಾತ್ರಿ ಆರಂಭವಾದ ಜಿಟಿಜಿಟಿ ಮಳೆ ಭಾನುವಾರವೂ ಮುಂದುವರಿದಿದೆ.
ತಡರಾತ್ರಿ ಪ್ರಾರಂಭವಾದ ವರ್ಷಧಾರೆ ನಸುಕಿನ ಜಾವ ಕೆಲ ನಿಮಿಷ ಬಿಡುವು ಮಾಡಿಕೊಂಡು ಪುನಃ ಸುರಿಯಲು ಆರಂಭಿಸಿದೆ.
ಶನಿವಾರ ಕೂಡ ನಸುಕಿನ ಜಾವ ಆರಂಭವಾದ ಜಿಟಿಜಿಟಿ ಮಳೆ ಬಿಟ್ಟು ಬಿಟ್ಟು ದಿನವಿಡೀ ಸುರಿದಿತ್ತು.
ಮಳೆಯಿಂದಾಗಿ ರಜಾ ದಿನವಾದ ಭಾನುವಾರ ಜನ ಮನೆಗಳಿಂದ ಹೊರಬರಲಿಲ್ಲ. ಬಹುತೇಕ ರಸ್ತೆಗಳು ನಿರ್ಜನವಾಗಿವೆ.
ಸತತ ಗಾಳಿ ಸಮೇತ ಮಳೆಯಿಂದಾಗಿ ವಾತಾವರಣ ಸಂಪೂರ್ಣ ತಂಪಾಗಿದೆ. ತಾಲ್ಲೂಕಿನ ಹಂಪಿ, ಕಮಲಾಪುರ, ನಾಗೇನಗಳ್ಳಿ, ಧರ್ಮಸಾಗರ, ಚಿನ್ನಾಪುರ, ನಲ್ಲಾಪುರ, ವಡ್ಡರಹಳ್ಳಿ, ಸಂಕ್ಲಾಪುರ, ಬಸವನದುರ್ಗ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.