ADVERTISEMENT

ಕೊಟ್ಟೂರು| ಕಾಯಕಕ್ಕೆ ಮಹತ್ವ ನೀಡಿದ ಶರಣರು: ತಹಶೀಲ್ದಾರ್‌ ಜಿ.ಕೆ ಅಮರೀಶ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 5:23 IST
Last Updated 11 ಫೆಬ್ರುವರಿ 2026, 5:23 IST
ಕೊಟ್ಟೂರು ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಕಾಯಕ ಶರಣರ ಜಯಂತಿ ಆಚರಿಸಲಾಯಿತು
ಕೊಟ್ಟೂರು ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಕಾಯಕ ಶರಣರ ಜಯಂತಿ ಆಚರಿಸಲಾಯಿತು   

ಕೊಟ್ಟೂರು: ‘ಶರಣರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು. ಹಾಗೂ ನುಡಿದಂತೆ ನಡೆದರು’ ಎಂದು ತಹಶೀಲ್ದಾರ್‌ ಜಿ.ಕೆ ಅಮರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿರುವ ಮೌಢ್ಯವನ್ನು ನಿವಾರಿಸಲು ಶ್ರಮಿಸಿದ ಶರಣರ ನಡೆ ನುಡಿಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸಾಮರಸ್ಯದ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದರು.

ಡಿಎಸ್ಎಸ್ ಜಿಲ್ಲಾ ಘಟಕದ ಸಂಚಾಲಕರಾದ ಬದ್ಧಿ ಮರಿಸ್ವಾಮಿ ಮಾತನಾಡಿ, ಶರಣರು ಯಾವುದೇ ಕಾಯಕ ಮಾಡಲಿ ಅದರಲ್ಲಿ ಶ್ರೇಷ್ಠತೆ ಕಂಡಕೊಂಡಿದ್ದರು. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು. ವಕೀಲ ಟಿ. ಹನುಮಂತಪ್ಪ ಮಾತನಾಡಿದರು.

ADVERTISEMENT

ಶಿರಸ್ತೇದಾರರಾದ ಎಚ್.ಎಂ. ಕೊಟ್ರಮ್ಮ, ಚಂದ್ರ ನಾಯ್ಕ, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಹರೀಶ್, ಮಂಜಮ್ಮ, ವೀರೇಶ್ ತುಪ್ಪದ, ಮಂಜುನಾಥ್, ಮಣಿಕಂಠ, ಕನ್ನಾಕಟ್ಟೆ ಶಿವರಾಜ್, ಸಿ.ಮ. ಗುರುಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.