
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಕೊಟ್ಟೂರು: ಮದ್ಯ ಸೇವನೆಯ ದುಶ್ಚಟಕ್ಕೆ ಬಲಿಯಾಗಿ ಆನಾರೋಗ್ಯದಿಂದ ವ್ಯಕ್ತಿಯೊಬ್ಬ ಸಾವಿಗಿಡಾದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ವೈ.ಬಸವರಾಜ್( 40) ಸಾವಿಗೀಡಾದ ವ್ಯಕ್ತಿ, ಮೂಲತಃ ಹರಪನಹಳ್ಳಿ ವಾಸಿಯಾದ ಮೃತನು ಅನಾರೋಗ್ಯದಿಂದ ಬಳಲುತ್ತಿದ್ದರೂ ಅತಿಯಾದ ಮದ್ಯ ಸೇವನೆಯಿಂದ ಊರೂರು ಅಲೆದಾಡುತ್ತ ಇತ್ತೀಚಿಗೆ ಪಟ್ಟಣದ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದನು.
ಮೃತನು ಪಟ್ಟಣದ ಕೆರೆಯ ದಂಡೆಯ ಮೇಲೆ ನಿಶಕ್ತನಾಗಿ ಅಸ್ವಸ್ಥ ಗೊಂಡು ಮೃತಪಟ್ಟಿರುತ್ತಾನೇ ವಿನಃ ಯಾರ ಮೇಲೂ ಅನುಮಾನವಿರುವುದಿಲ್ಲ ಎಂದು ಮೃತನ ಪತ್ನಿ ನೀಡಿದ ದೂರಿನನ್ವಯ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.