
ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ₹ 78,70,030 ಹಣ ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಎಚ್.ಸವಿತಾ ತಿಳಿಸಿದರು.
ದೇವಸ್ಥಾನದ ಕಾರ್ಯಾಲಯದಲ್ಲಿ ಬುಧವಾರ ಹುಂಡಿ ಏಣಿಕೆ ಕಾರ್ಯ ನಡೆಯಿತು. ಕಳೆದ ಮಾರ್ಚ್ 26 ರಂದು ಏಣಿಕೆ ಕಾರ್ಯ ನಡೆದಿತ್ತು. ಕಳೆದ 7 ತಿಂಗಳ ಅವಧಿಯೊಳಗೆ ಈ ಹಣ ಸಂಗ್ರಹವಾಗಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಧರ್ಮಕರ್ತರಾದ ಎಂ.ಕೆ.ಶೇಖರಯ್ಯ, ಧಾರ್ಮಿಕ ಇಲಾಖೆಯ ಅಧೀಕ್ಷಕರಾದ ಪುಷ್ಪ ಭರಣಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಹಾಗೂ ಕಾರ್ತೀಕ್, ಎಚ್.ಸುರೇಶ್, ಪ್ರದೀಪ್, ರೇಣುಕಮ್ಮ, ಎಂ.ನಾಗರಾಜ್, ಕೊಟ್ರೇಶ್ವರಿ ಹಾಗೂ ಮರಬದ ನಾಗರಾಜ್, ಕೆಂಪಳ್ಳಿ ಗುರುಸಿದ್ದನಗೌಡ, ಪ್ರೇಮಾನಂದ ಗೌಡ, ನಾಗರಾಜ್ ಗೌಡ, ಪೊಲೀಸ್ ಇಲಾಖೆ , ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ, ಇಂದು ಕಾಲೇಜ್ ವಿದ್ಯಾರ್ಥಿಗಳು, ಆಯಗಾರ ಬಳಗ, ಕಟ್ಟೆಮನೆ ದೈವಸ್ಥರು ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.