
ಕೊಟ್ಟೂರು: ಪಟ್ಟಣದ ವೈದ್ಯ ಡಾ.ಜಿ.ಸಂತೋಷಕುಮಾರ್ ಇತ್ತೀಚಿಗೆ ಅರ್ಜೆಂಟೆನಾ ದೇಶದ ಅತಿ ಎತ್ತರದ ಪರ್ವತವಾಗಿರುವ ಮೌಂಟ್ ಅಕಾಂಕಾಗುವಾ ಶಿಖರವನ್ನು 8 ತಾಸಿನೊಳಗೆ ಏರುವ ಮೂಲಕ ಸಾಧನೆಗೈದಿದ್ದು, ಇವರ ತಂಡದವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭ ಕೋರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಕೊಟ್ಟೂರಿನವರಾದ ಯುವ ವೈದ್ಯ ಡಾ.ಸಂತೋಷಕುಮಾರ್ ಚಿಕ್ಕಜೋಗಿಹಳ್ಳಿಯ ನವೋದಯ ವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡಿ ರಷ್ಯಾ ದೇಶದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವಾಗ ದೇಶ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2024ರಲ್ಲಿ ಪರ್ವತಾರೋಹಿಗಳೊಂದಿಗೆ ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪರ್ವತ ಶಿಖರವನ್ನು ಏರಿದ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿದೆ. ವೃತ್ತಿಯ ಜೊತೆ ಹಲವು ಪ್ರವೃತ್ತಿಗಳನ್ನು ರೂಢಿಸಿಕೊಂಡು ಸಾಧನೆಗೈಯುತ್ತಿರುವ ಡಾ.ಜಿ.ಸಂತೋಷಕುಮಾರ್ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.