ಕೂಡ್ಲಿಗಿ: ರಾಜ ವೀರ ಮದಕರಿ ನಾಯಕ ಜಯಂತಿ ಅಂಗವಾಗಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದಿಂದ ಪಟ್ಟಣದ ಮದಕರಿ ವೃತ್ತದಲ್ಲಿ ಮದಕರಿ ನಾಯಕರ ಚಿತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಲಾಯಿತು.
ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಸುರೇಶ್ ಮತಾನಾಡಿ, ‘ಜಗತ್ತು ಕಂಡಂತಹ ಅಪ್ರತಿಮ ಹೋರಾಟಗಾರ, ಧೈರ್ಯ, ಸಾಹಸ, ಸ್ವಾಭಿಮಾನ ಮತ್ತು ಪರಧರ್ಮ ಸಹಿಷ್ಣುತೆಗೆ ಮದಕರಿ ನಾಯಕರು ಹೆಸರಾಗಿದ್ದರು. ಇಂತಹ ಮಹಾನ್ ರಾಜರ ಪುತ್ಥಳಿಯನ್ನು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಮದಕರಿ ವೃತ್ತದಲ್ಲಿ ಸ್ಥಾಪನೆ ಮಾಡಲು ಒಪ್ಪಿಕೊಂಡಿದ್ದಾರೆ. ಎಲ್ಲ ಸಹಕಾರ ಪಡೆದು ಮುಂದಿನ ವರ್ಷದ ಜಯಂತಿ ವೇಳೆಗೆ ಪುತ್ಥಳಿ ಸ್ಥಾಪನೆ ಮಾಡಲಾಗುವುದು’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕೆ. ಈಶಪ್ಪ, ಮುಖಂಡರಾದ ಎನ್. ಅಜೇಯ, ಗುರಿಕಾರ ರಾಘವೇಂದ್ರ, ದೇವರಮನೆ ಮಹೇಶ, ನಲ್ಲಮುತ್ತಿ ದುರುಗೇಶ, ಮಲ್ಲಾಪುರ ನಾಗರಾಜ, ರಾಮಸಾಲಿ ಅಜೇಯ, ಜಿ. ಗನೇಶ, ಹನುಮಂತಪ್ಪ, ಕುಸ್ತಿ ದುರುಗಪ್ಪ, ಶಾಮಿಯಾನ ಚಂದ್ರು, ಕೆ.ಬಿ. ನಾಗರಾಜ, ವೆಂಕಟೇಶ್, ಕಾಟಮಲ್ಲಿ ಕೊಟ್ರೇಶ, ಅಂಬಲಿ ಹನುಮಂತು, ಸಕ್ರಪ್ಪ, ಮಾರೇಶ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.