ADVERTISEMENT

₹18.56 ಕೋಟಿ ಸಾಲ ವಿತರಣೆ: ಎಸ್.ಎಂ. ರೇವಣಸಿದ್ದಯ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:34 IST
Last Updated 25 ಸೆಪ್ಟೆಂಬರ್ 2025, 5:34 IST
ಕುರುಗೋಡು ತಾಲ್ಲೂಕಿನ ದಮ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ. ರೇವಣಸಿದ್ದಯ್ಯ ಮಾತನಾಡಿದರು
ಕುರುಗೋಡು ತಾಲ್ಲೂಕಿನ ದಮ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ. ರೇವಣಸಿದ್ದಯ್ಯ ಮಾತನಾಡಿದರು   

ಕುರುಗೋಡು: ‘ತಾಲ್ಲೂಕಿನ ದಮ್ಮೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ₹18.56 ಕೋಟಿ ಸಾಲ ನೀಡಿದ್ದು, ₹9.64 ಲಕ್ಷ ಲಾಭ ಗಳಿಸಿದೆ’ ಎಂದು ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ. ರೇವಣಸಿದ್ದಯ್ಯ ಹೇಳಿದರು.

ಇಲ್ಲಿನ ಸಂಘದ ಕಚೇರಿ ಆವರಣದಲ್ಲಿ ಬುಧವಾರ ಜರುಗಿದ ವಾರ್ಷಿಕ ಮಹಾಜನಸಭೆಯಲ್ಲಿ ಮಾತನಾಡಿದರು.

‘884 ಸದಸ್ಯರಿಗೆ ಬೆಳೆಸಾಲ, ಮದ್ಯಮಾವಧಿ ಸಾಲ ನೀಡಿದ್ದು, ವಸೂಲಾತಿಯಲ್ಲಿ ಶೇ 91ರಷ್ಟು ಸಾಧನೆ ಮಾಡಿದೆ’ ಎಂದರು.

ADVERTISEMENT

ಸಂಘದ ಅಧ್ಯಕ್ಷ ಜಿ. ಸಂಜೀವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ. ಅಂಜಿನಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ. ಶಂಕರ ಗೌಡ, ಸಿ. ಗೋಪಾಲ, ಎಂ. ದೇವರೆಡ್ಡಿ, ಕೆ. ಮಲ್ಲಿಕಾರ್ಜುನ ರೆಡ್ಡಿ, ಎ. ಸರ್ವೋತ್ತಮ ಗೌಡ, ಪೂಜಾರಿ ಬಸವರಾಜ, ಕಾಳಿ ಮಂಜುನಾಥ, ಜೆ. ಪುಷ್ಪಾ, ಜಿ. ಮಂಗಮ್ಮ, ಚಲವಾದಿ ಹಂಪಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.