ADVERTISEMENT

ಕುರುಗೋಡು: ನೀಲಮ್ಮ ತಾಯಿಗೆ ಉಡಿ ತುಂಬುವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:21 IST
Last Updated 3 ಮಾರ್ಚ್ 2026, 2:21 IST
ಕುರುಗೋಡಿನಲ್ಲಿ ಮಹಿಳೆಯರು ಬುಧವಾರ ನೀಲಮ್ಮ ತಾಯಿಗೆ ಉಡಿ ತುಂಬಿದರು
ಕುರುಗೋಡಿನಲ್ಲಿ ಮಹಿಳೆಯರು ಬುಧವಾರ ನೀಲಮ್ಮ ತಾಯಿಗೆ ಉಡಿ ತುಂಬಿದರು   

ಕುರುಗೋಡು: ಪಟ್ಟಣದಲ್ಲಿ ಮಾರ್ಚ್ 3ರಂದು ಜರುಗುದ ದೊಡ್ಡಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಪಟ್ಟಣದ ಹೂಗಾರ್ ಗುಂಡಪ್ಪನವರ ಮನೆಯಲ್ಲಿ ಪ್ರತಿಷ್ಟಾಪಿಸಿದ್ದ ನೀಲಮ್ಮ ತಾಯಿ ಉತ್ಸವ ಮೂರ್ತಿಗೆ ಉಡಿತುಂಬುವ ಕಾರ್ಯಕ್ರಮ ಭಾನುವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ನೀಲಮ್ಮ ತಾಯಿ ಉತ್ಸವಮೂರ್ತಿಗೆ ಬೆಳಿಗ್ಗೆ ಯಿಂದ ವಿಶೇಷ ಪೂಜಾ ಕೌಂಕರ್ಯಗಳು ಜರುಗಿದವು.

ಜಾತಿ, ಮತ, ಪಂಥ ಬೇಧವಿಲ್ಲದೆ ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ನೀಲಮ್ಮ ತಾಯಿಗೆ ಶಾಸ್ತ್ರೋತ್ಕವಾಗಿ ಉಡಿತುಂಬಿ ಭಕ್ತಿ ಸಮರ್ಪಿಸಿದರು.

ADVERTISEMENT

ಈ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ವಾಸವಿರುವ ಎಲ್ಲ ಜನಾಂಗದವರು ಭಾಗವಹಿಸಿ ಉಡಿತುಂಬಿ ಭಕ್ತಿ ಮೆರೆಯುವುದು ವಿಶೇಷ.

ಉಡಿ ತುಂಬುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೂಗಾರ್ ಓಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರಿಂದ ಸಂಭ್ರಮ ಮನೆ ಮಾಡಿತ್ತು.

ರಸ್ತೆಯ ಎರಡೂ ಬದಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ಆಕರ್ಷಿಸಿತು.

ಸುಗಮ ಮತ್ತು ಅದ್ದೂರಿ ರಥೋತ್ಸವಕ್ಕೆ ದೇವಸ್ಥಾನದಲ್ಲಿ ತಯಾರಿ ಪೂರ್ಣಗೊಂಡಿದೆ. ಮಾರ್ಚ್ 2 ರಿಂದ 4ರ ವರೆಗೆ ದೇವಸ್ಥಾನದ ವತಿಯಿಂದ ದಾಸೋಹದ ವ್ಯವಸ್ತೆ ಮಾಡಿದೆ
ಹನುಮಂತಪ್ಪ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.