
ಕುರುಗೋಡು: ಶಾರ್ಟ್ ಸರ್ಕಿಟ್‌ನಿಂದ ಮೂರು ಗುಡಿಸಲುಗಳು ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಯರಿಂಗಳಿಗಿ ಕ್ಯಾಂಪ್‍ನಲ್ಲಿ ಭಾನುವಾರ ಜರುಗಿದೆ.
ಹೊನ್ನೂರುಸ್ವಾಮಿ, ಮಲ್ಲಯ್ಯ ಮತ್ತು ಕೃಷ್ಣ ಎನ್ನುವ ರೈತರಿಗೆ ಸೇರಿದ ಗುಡಿಸಲುಗಳು ಎಂದು ಗುರುತಿಸಲಾಗಿದೆ.
ಮಲ್ಲಯ್ಯನ ಗುಡಿಸಲಿನಲ್ಲಿದ್ದ ₹ 3 ಲಕ್ಷ ನಗದು ಮತ್ತು 5 ಗ್ರಾಂ. ಚಿನ್ನ, ಹೊನ್ನೂರಸ್ವಾಮಿ ಅವರ ಗುಡಿಸಲಿನಲ್ಲಿ ಮಕ್ಕಳ ಅಂಕಪಟ್ಟಿ, ಶಿಕ್ಷಣ ಪ್ರಮಾಣ ಪತ್ರ ಮತ್ತು ಭಾಗ್ಯಲಕ್ಷ್ಮಿ ಬಾಂಡ್, ಕೃಷ್ಣವರ ಗುಡಿಸಲಿನಲ್ಲಿ ದವಸ ಧಾನ್ಯ, ಟಿವಿ, ಫ್ರಿಡ್ಜ್, ನಿತ್ಯಬಳಕೆ ವಸ್ತುಗಳು ಸುಟ್ಟು ನಷ್ಟವಾಗಿವೆ.
ಮಲ್ಲಯ್ಯ ಅವರ ಗುಡಿಸಲಿನಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿಯ ಪ್ರಮಾಣ ಹೆಚ್ಚಾಗಿ ನೆರೆಯ ಎರಡು ಗುಡಿಸಲುಗಳಿಗೆ ವ್ಯಾಪಿಸಿ ಘಟನೆ ಸಂಭವಿಸಿದೆ.
ಕುರುಗೋಡಿನ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿಗೆ ಸಂಭವಿಸಬಹುದಾಗಿ್ದ ಅನಾಹುತ ತಪ್ಪಿಸಿದ್ದಾರೆ.
ನರಸಪ್ಪ ತಹಶೀಲ್ದಾರ್, ಪಿಎಸ್‍ಐ ಸುಪ್ರಿತ್ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.