ಹೂವಿನಹಡಗಲಿ: ವಿವಾಹಿತೆಯೊಬ್ಬರು ತಾಲ್ಲೂಕಿನ ಮದಲಗಟ್ಟಿ ಸೇತುವೆ ಮೇಲಿಂದ ತುಂಗಭದ್ರಾ ನದಿಗೆ ಜಿಗಿದು ನೀರು ಪಾಲಾಗಿರುವ ಘಟನೆ ಜರುಗಿದೆ.
ತಾಲ್ಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದ ಜ್ಯೋತಿ (28) ನೀರು ಪಾಲಾದವರು ಎಂದು ತಿಳಿದು ಬಂದಿದೆ.
ಮಹಿಳೆ ಸೇತುವೆ ಮೇಲಿಂದ ಜಿಗಿಯುವುದನ್ನು ಸ್ಥಳೀಯರು ನೋಡಿದ್ದಾರೆ. ಮೀನುಗಾರರು ರಕ್ಷಣೆಗೆ ಅಣಿಯಾಗುವಷ್ಟರಲ್ಲಿ ರಭಸವಾಗಿ ಹರಿಯುವ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶನಿವಾರ ಇಡೀ ದಿನ ನದಿಯಲ್ಲಿ ಶೋಧ ಕಾರ್ಯ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ.
ಡೆತ್‌ನೋಟ್ ಪತ್ತೆ: ಆಕೆ ಮನೆಬಿಟ್ಟು ಬರುವಾಗ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಜಾಲತಾಣದಲ್ಲಿ ವೈರಲ್ ಆಗಿದೆ.
‘ಪ್ರಿಯಕರ ನನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾನೆ. ಬೇರೆ ಯುವತಿ ಜತೆಗೂ ಆತ ಸಂಬಂಧ ಇರಿಸಿಕೊಂಡು ನನಗೆ ವಂಚಿಸಿದ್ದಾನೆ. ನನ್ನ ಸಾವಿಗೆ ಆತನೇ ಕಾರಣ’ ಎಂದು ಯುವತಿ ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ಕುಟುಂಬದವರು ಮಹಿಳೆ ಕಾಣೆಯಾಗಿದ್ದಾಳೆ ಎಂದು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.