ADVERTISEMENT

ಮೊಹರಂ, ವರಮಹಾಲಕ್ಷ್ಮಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 11:16 IST
Last Updated 20 ಆಗಸ್ಟ್ 2021, 11:16 IST
ಮೊಹರಂ ನಿಮಿತ್ತ ಶುಕ್ರವಾರ ಹೊಸಪೇಟೆಯಲ್ಲಿ ಬಾಲಕರು  ಬಣ್ಣ ಬಳಿದುಕೊಂಡು ಹುಲಿ ವೇಷಧಾರಿಗಳಾದರು
ಮೊಹರಂ ನಿಮಿತ್ತ ಶುಕ್ರವಾರ ಹೊಸಪೇಟೆಯಲ್ಲಿ ಬಾಲಕರು  ಬಣ್ಣ ಬಳಿದುಕೊಂಡು ಹುಲಿ ವೇಷಧಾರಿಗಳಾದರು   

ಹೊಸಪೇಟೆ (ವಿಜಯನಗರ): ಕೊರೊನಾ ಕರಿಛಾಯೆಯ ನಡುವೆ ಮೊಹರಂ, ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ನಗರದಲ್ಲಿ ಆಚರಿಸಲಾಯಿತು.

ನಗರದ ರಾಮ ಟಾಕೀಸ್‌ ಬಳಿಯ ರಾಮಲಿ ಮಸೀದಿಯಲ್ಲಿ ಪೀರಲ ದೇವರಿಗೆ ಪೂಜೆ ನೆರವೇರಿಸಲಾಯಿತು. ವಿವಿಧ ಕಡೆಗಳಿಂದ ಹಿಂದೂ ಮುಸ್ಲಿಮರು ಬಂದು ದರ್ಶನ ಪಡೆದರು. ಮಸೀದಿ ಎದುರು ಉಪ್ಪು ಹಾಕಿ, ಉದೀನ ಕಡ್ಡಿ ಬೆಳಗಿ ದೇವರಿಗೆ ಕೈಮುಗಿದರು. ಇನ್ನು, ವಯಸ್ಕರು, ಯುವಕರು, ಬಾಲಕರು ಮೈಗೆ ಹುಲಿ ಬಣ್ಣ ಬಳಿದುಕೊಂಡರು.

ಹೆಚ್ಚಿನ ಜನ ಸೇರುವುದಕ್ಕೆ ಅವಕಾಶ ಕಲ್ಪಿಸದ ಕಾರಣ ಈ ಹಿಂದಿನ ವರ್ಷಗಳಲ್ಲಿ ಕಂಡು ಬರುತ್ತಿದ್ದ ಸಂಭ್ರಮ ಕಂಡು ಬರಲಿಲ್ಲ.

ADVERTISEMENT

ವರಮಹಾಲಕ್ಷ್ಮಿ ಪೂಜೆ:

ನಗರದ ವಿವಿಧ ಬಡಾವಣೆಗಳಲ್ಲಿ ಶುಕ್ರವಾರ ಮಹಿಳೆಯರು ಅವರ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ವಿದ್ಯುತ್‌ ದೀಪಗಳಿಂದ ಸಿಂಗರಿಸಿ ಪೂಜೆ ನೆರವೇರಿಸಿದರು. ದೇವರಿಗೆ ಮಾಡಿದ ನೈವೇದ್ಯ ಅರ್ಪಿಸಿದರು.

ಹೊಸ ಬಟ್ಟೆ ಧರಿಸಿ, ಪೂಜೆ ನೆರವೇರಿಸಿದ ನಂತರ ದೇವಿಯ ಸಮ್ಮುಖದಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.