ಪ್ರಾತಿನಿಧಿಕ ಚಿತ್ರ
ಹೂವಿನಹಡಗಲಿ: ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ರೈತರೊಬ್ಬರ ಹಿತ್ತಲಿನ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ಜಾನುವಾರು ಬುಧವಾರ ರಾತ್ರಿ ಕಳವಾಗಿವೆ.
ರೈತ ದೇವರಮನಿ ಗೋಣೆಪ್ಪ ಅವರಿಗೆ ಸೇರಿದ ಮಿಶ್ರತಳಿಯ ಮೂರು ಆಕಳುಗಳು ಕಳವಾಗಿವೆ. ಹಿತ್ತಲ ಸಮೀಪ ವಾಹನ ಓಡಾಡಿರುವ ಗುರುತುಗಳಿದ್ದು, ಕಳ್ಳರು ಜಾನುವಾರನ್ನು ಟಾಟಾಏಸ್ ವಾಹನದಲ್ಲಿ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಜನವರಿಯಲ್ಲಿ ಪಟ್ಟಣದಲ್ಲಿ ಜಾನುವಾರು ಸರಣಿ ಕಳವು ಪ್ರಕರಣಗಳು ನಡೆದಿದ್ದವು. ಹೊಳಗುಂದಿ ಹಾಗೂ ಇತರ ಗ್ರಾಮಗಳಲ್ಲಿ ಆಕಳುಗಳು ಕಳುವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.