ADVERTISEMENT

ಹಂಪಿಯಲ್ಲಿ ಪರ್ಜನ್ಯ ಹೋಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 9:24 IST
Last Updated 6 ಜೂನ್ 2019, 9:24 IST
ಮಳೆಗಾಗಿ ಪ್ರಾರ್ಥಿಸಿ ಹಂಪಿಯಲ್ಲಿ ಗುರುವಾರ ಪರ್ಜನ್ಯ ಹೋಮ ಮಾಡಲಾಯಿತು
ಮಳೆಗಾಗಿ ಪ್ರಾರ್ಥಿಸಿ ಹಂಪಿಯಲ್ಲಿ ಗುರುವಾರ ಪರ್ಜನ್ಯ ಹೋಮ ಮಾಡಲಾಯಿತು   

ಹೊಸಪೇಟೆ: ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಗುರುವಾರ ಪರ್ಜನ್ಯ ಹೋಮ ಮಾಡಲಾಯಿತು.

ನಗರದ ವಡಕರಾಯ ದೇವಸ್ಥಾನ, ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಬುಕ್ಕಸಾಗರದ ಏಳು ಹೆಡೆ ನಾಗಪ್ಪ ಸ್ವಾಮಿ, ಹೊಸೂರಿನ ಹೊಸೂರಮ್ಮ ದೇವಾಲಯದಲ್ಲಿ ಜಪ, ಹೋಮ, ಪಂಚಾಮೃತ ಅಭಿಷೇಕ, ಅರ್ಚನೆ, ದೇವರಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

‘ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಶ್ರದ್ಧಾ, ಭಕ್ತಿಯಿಂದ ಪರ್ಜನ್ಯ ಹೋಮ ಮಾಡಲಾಗಿದೆ’ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಪ್ರಕಾಶ್‌ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.