ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಶುಕ್ರವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿ ಮಹಮ್ಮದ್ ಪೈಗಂಬರ್ ಅವರ 1,500ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿರು.
ಜಾತಿ, ಮತ, ಪಂಥ, ಪಕ್ಷಬೇಧವಿಲ್ಲದೆ 123 ಜನರು ಶಿಬಿರದಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ ಮಾತನಾಡಿ, ಸಂಭವನೀಯ ಹೃದಯ ರೋಗ ತಡೆಯಲು ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಅಪಘಾತ ಮತ್ತು ಗರ್ಭಿಣಿಯರಿಗೆ ಸಮಯಕ್ಕೆ ಸರಿಯಾಗಿ ರಕ್ತದೊರೆಯದೆ ಚಿಕಿತ್ಸೆ ವಿಫಲವಾಗಿ ಮೃತಪಡುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ, ಮದ್ಯ ಮತ್ತು ಮಾದಕ ವೆಸನಿಗಳಿಂದ ರಕ್ತ ಪಡೆಪಡೆಯುವಂತಿಲ್ಲ. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಎಸ್.ಖಾದರ್ ಬಾಷ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ರಕ್ತವನ್ನು ಮನುಷ್ಯರ ದೇಹದಿಂದಲೇ ಪಡೆದುಕೊಳ್ಳಬೇಕು. ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಜತೆಗೆ ನಿತ್ಯ ಕ್ರಿಯಾಶೀಲರಾಗಿರಬಹುದು ಎಂದರು. ಪ್ರಥಮಬಾರಿಗೆ ಆಯೋಜಿಸಿರುವ ಶಿಬಿರ ಯಶಸ್ವಿಗೆ ಸಹಕರಿಸಿದ ಗ್ರಾಮದ ಎಲ್ಲ ಸಮಾಜದ ಮುಖಂಡರಿಗೆ ಧನ್ಯವಾರತಿಳಿಸಿದರು
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ ಭೀಮಲಿಂಗಪ್ಪ ಮಾತನಾಡಿದರು.
ಡಾ.ಪೂಜಾರ ನಾಗರಾಜ್, ಹಿರಿಯ ಕ್ಷೇತ್ರ ಆರೋಗ್ಯಾಧಿಕಾರಿ ಖಾಸಿಂ ಸಾಬ್, ಪ್ರಮುಖರಾದ ಸಿ.ಎಂ ನಾಗರಾಜ್ ಸ್ವಾಮಿ, ಕೆ.ದ್ಯಾವಣ್ಣ, ಹಾಗಲೂರು ಮಲ್ಲನಗೌಡ, ಎಸ್.ಎಂ ನಾಗರಾಜ್ ಸ್ವಾಮಿ, ಗೋಡೆ ಚಿನ್ನಪ್ಪ, ಸೋಮಶೇಖರಪ್ಪ, ಎಸ್.ಎಂ ಅಡಿವೆಯ್ಯ ಸ್ವಾಮಿ, ರಾರಾವಿ ವೆಂಕಟೇಶ್, ರೇಣುಕಪ್ಪ, ವಿ.ಹನುಮೇಶ್, ಮುರ್ಷಿದ್ ಅಹ್ಮದ್, ಮಾಬುಸಾಬ್, ಅನ್ವರ್‌ಬಾಷ, ಮಹ್ಮದ್, ಚಾಂದ್‌ಬಾಷ, ಗುಜರಿ ಮಾಬುಸಾಬ್, ಜಿಲಾನ್‌ಬಾಷ, ಶೇಕ್ಷಾವಲಿ, ಸಲೀಂ, ಎಂ.ಆಜಾಮ್ ಬಾಷ, ಇದ್ದರು.
ಹರಪನಹಳ್ಳಿ: ನಗರ ಪ್ರದೇಶ ಒಳಗೊಂಡು ತಾಲ್ಲೂಕಿನ ವಿವಿಧೆಡೆ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಚಿತ್ತಾರಗೇರಿ ದೈವಸ್ಥರು ಮೆಕ್ಕಾ, ಮೆದಿನಾ ಸೇರಿ ಹಲವು ಚಿತ್ರಗಳನ್ನು ಅಳವಡಿಸಿ ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ಜರುಗಿದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು, ವೃದ್ಧರು ಸೇರಿ ನೃತ್ಯ ಮಾಡುತ್ತಾ ಗಮನ ಸೆಳೆದರು. ಹಲವು ಸಂಘಟನೆಗಳ ಕಾರ್ಯಕರ್ತರು ಪಾನಕ ಹಂಚಿದರೆ, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಒಳರೋಗಿಗಳಿಗೆ ಬ್ರೆಡ್, ಹಣ್ಣು ವಿತರಿಸಿದರು.
ಅಂಜುಮನ್ ಸಮಿತಿ ಅಧ್ಯಕ್ಷ ನೂರ್ ಅಹ್ಮದ್, ಡಾ.ವೆಂಕಟಪ್ಪ ನಾಯಕ, ಎಂ.ವಿ.ಅಂಜಿನಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಕರಬ್ಬಿ ಷರೀಪ್, ರಿಯಾಜ್, ಜಿಷನ್, ಸಾಧಿಕ್, ಖಾಜಾಪೀರ್, ಆಫ್ರಿದಿ, ಲಾಟಿ ದಾದಾಪೀರ, ಮೂಸಾಸಾಬ್ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.