ಕಂಪ್ಲಿ: ಪ್ರವಾದಿ ಮಹ್ಮದ್ ಪೈಗಂಬರ್ ಅವರ 1500ನೇ ಜನ್ಮದಿನ ಅಂಗವಾಗಿ ಶುಕ್ರವಾರ ಕೋಟೆಯ ಝಂಡಾಕಟ್ಟೆಯಿಂದ ಆರಂಭಗೊಂಡ ಮೆಕ್ಕಾ, ಮದೀನಾ ಸ್ತಬ್ಧ ಚಿತ್ರಗಳ ಮೆರವಣಿಗೆ ಬಡೇಸಾಹೇಬ್ ದರ್ಗಾದಲ್ಲಿ ಸಮಾರೋಪಗೊಂಡಿತು.
ಈದ್‍ಮಿಲಾದ್ ಕಮಿಟಿಯಿಂದ ಕಂಪ್ಲಿಯ ಯಾಸೀನ್ ಮಸೀದಿಯ ಚಂದ್ರಮದ್ಯದಲ್ಲಿನ ಮದೀನ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಮತ್ತು ಸಕ್ಕರೆ ಕಾರ್ಖಾನೆಯ ಆಶ್ರಫಿ ಮಸೀದಿಯ ಮೆಕ್ಕಾಮದೀನಾ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು.
ಇದಕ್ಕು ಮುನ್ನ ಪಟ್ಟಣದ ಸೈಯ್ಯದ್ ಷಾಹ್ ಬಡೇಸಾಹೇಬ್ ದರ್ಗಾದಲ್ಲಿ ಈದ್‍ಮಿಲಾದ್ ಪ್ರಾರ್ಥನೆ ಸಲ್ಲಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂಪಾಷ ಸಾಹೇಬ್ ಸಜ್ಜಾದೇ ನಶೀನ್ ದಿವಾನಾಖಾನಾ ಅವರು ಮಹಮ್ಮದ್ ಪೈಗಂಬರ್ ತತ್ವ ಆದರ್ಶಗಳ ಕುರಿತು ಸಂದೇಶ ನೀಡಿದರು.
ಮೆರವಣಿಗೆಯಲ್ಲಿ ಶಾಸಕ ಜೆ.ಎನ್. ಗಣೇಶ್ ಈದ್‍ಮಿಲಾದ್ ಶುಭಾಶಯ ಕೋರಿದರು. ಧರ್ಮಗುರುಗಳಾದ ಸೈಯ್ಯದ್‍ಷಾಹ್ ಅಬುತರಾಬ್ ಖಾದ್ರಿ, ಸೈಯ್ಯದ್‍ಷಾಹ್ ಚಾಂದ್‍ಪಾಷಖಾದ್ರಿ, ಸೈಯ್ಯದ್ ಷಾಹ್ ನೂರ್‍ಅಹ್ಮದ್ ಖಾದ್ರಿ, ಸೈಯ್ಯದ್‍ಷಾಹ್ ಉಮೇಸ್‍ಸಾಹೇಬ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಈದ್‍ಮಿಲಾದ್ ಕಮಿಟಿ ಅಧ್ಯಕ್ಷ ಯು. ಜಹೀರುದ್ದೀನ್, ಉಪಾಧ್ಯಕ್ಷ ಎಂ. ನಾಸೀರ್‍ದ್ದೀನ್, ಪದಾಧಿಕಾರಿ ಬಿ. ಇಮ್ರಾನ್‍ಖಾನ್, ಬಿ. ನೂರ್, ಅಬ್ದುಲ್ ಗಯಾಬ್ ಸೇರಿ ಎಲ್ಲಾ ಮೌಲ್ವಿಗಳು, ಎಲ್ಲಾ ಮಸೀದಿಗಳ ಮುತುವಲ್ಲಿಗಳು, ಹಾಫಿಸಾಬ್‍ಗಳು, ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.