ADVERTISEMENT

ಮತ್ತಿಬ್ಬರಿಗೆ ಕೋವಿಡ್‌ ದೃಢ, ರೈಲ್ವೆ ಚಾಲಕರ ವಿಶ್ರಾಂತಿ ಗೃಹ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 14:29 IST
Last Updated 12 ಮಾರ್ಚ್ 2021, 14:29 IST
ಹೊಸಪೇಟೆ ರೈಲು ನಿಲ್ದಾಣದ ಚಾಲಕ ಹಾಗೂ ಗಾರ್ಡ್‌ ವಿಶ್ರಾಂತಿ ಗೃಹವನ್ನು ಶುಕ್ರವಾರ ಸೀಲ್‌ಡೌನ್‌ ಮಾಡಲಾಗಿದೆ
ಹೊಸಪೇಟೆ ರೈಲು ನಿಲ್ದಾಣದ ಚಾಲಕ ಹಾಗೂ ಗಾರ್ಡ್‌ ವಿಶ್ರಾಂತಿ ಗೃಹವನ್ನು ಶುಕ್ರವಾರ ಸೀಲ್‌ಡೌನ್‌ ಮಾಡಲಾಗಿದೆ   

ವಿಜಯನಗರ (ಹೊಸಪೇಟೆ): ನಗರದ ರೈಲು ನಿಲ್ದಾಣದ ನೌಕರರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇನ್ನಿಬ್ಬರಲ್ಲಿ ಶುಕ್ರವಾರ ಕೋವಿಡ್‌–19 ದೃಢಪಟ್ಟಿದೆ.

ಇದರಿಂದಾಗಿ ರೈಲ್ವೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಗುರುವಾರ ಇಬ್ಬರಲ್ಲಿ ಸೋಂಕಿರುವುದು ಖಚಿತವಾಗಿತ್ತು.

ಮಂಗಳವಾರ (ಮಾ.9) ರೈಲ್ವೆ ಇಲಾಖೆಯ 18 ಜನ ನೌಕರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇವರ ಸಂಪರ್ಕಕ್ಕೆ ಬಂದಿದ್ದ 90 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ADVERTISEMENT

ದಿನೇ ದಿನೇ ರೈಲ್ವೆ ನೌಕರರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ರೈಲು ನಿಲ್ದಾಣವನ್ನು ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ.

ಹೆಚ್ಚಿನ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದರಿಂದ ನಗರದ ರೈಲು ನಿಲ್ದಾಣವನ್ನು ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ. ನಿಲ್ದಾಣದ ಚಾಲಕರು ಮತ್ತು ಗಾರ್ಡ್‌ ವಿಶ್ರಾಂತಿ ಗೃಹವನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.