ADVERTISEMENT

ರಾಮನವಮಿ; ದೇಗುಲದಲ್ಲಿ ಭಕ್ತರು ವಿರಳ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 11:49 IST
Last Updated 21 ಏಪ್ರಿಲ್ 2021, 11:49 IST
ರಾಮನವಮಿ ಪ್ರಯುಕ್ತ ಬುಧವಾರ ಹೊಸಪೇಟೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಚಂದ್ರ, ಸೀತೆ ಹಾಗೂ ಲಕ್ಷ್ಮಣ ಅವರಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು
ರಾಮನವಮಿ ಪ್ರಯುಕ್ತ ಬುಧವಾರ ಹೊಸಪೇಟೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಚಂದ್ರ, ಸೀತೆ ಹಾಗೂ ಲಕ್ಷ್ಮಣ ಅವರಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು   

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆಯ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. ಕೋವಿಡ್‌ ಕಾರಣದಿಂದ ಹೆಚ್ಚಿನ ಜನರನ್ನು ಸೇರಿಸದೆ ಸರಳವಾಗಿ ಧಾರ್ಮಿಕ ಕಾರ್ಯ ಪೂರ್ಣಗೊಳಿಸಲಾಯಿತು. ಬೆರಳೆಣಿಕೆಯ ಭಕ್ತರಷ್ಟೇ ಬಂದು ದೇವರ ದರ್ಶನ ಪಡೆದುಕೊಂಡು ಹಿಂತಿರುಗಿದರು. ದೇಗುಲದ ಹೊರಭಾಗದಲ್ಲಿ ಭಕ್ತರು, ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು.

ವೀರಶೈವ ಲಿಂಗಾಯತ ಮಹಿಳಾ ಸಂಘಟನಾ ವೇದಿಕೆ:

ADVERTISEMENT

ಸಂಘಟನೆಯಿಂದ ನಗರದ ಸಿದ್ಧಲಿಂಗಪ್ಪ ಚೌಕಿಯಲ್ಲಿ ಸರಳ ರೀತಿಯಲ್ಲಿ ರಾಮನವಮಿ ಆಚರಿಸಲಾಯಿತು. ಸಂಘಟನೆಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷೆ ಸುಮಾ ಸುರೇಶ್‌ ಮಾತನಾಡಿ, ‘ಕೊರೊನಾ ಮಹಾಮಾರಿಯಿಂದ ದೇಶ ಹೊರಬರಲು ಶ್ರೀರಾಮಚಂದ್ರ ಶಕ್ತಿ ಕೊಡಬೇಕು’ ಎಂದು ಹೇಳಿದರು.
ಮಲ್ಲಿಕಾರ್ಜುನ, ಚನ್ನಪ್ಪ, ರೂಪಿಯಾ ನಾಗರಾಜ್‌, ಮಂಜು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.