ತೆಕ್ಕಲಕೋಟೆ: ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 150 ಎ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ತುಲಾಭಾರ ಹಾಗೂ ನಾರಿದಟ್ಟಿ ಕಾರ್ಯಕ್ರಮ ನಡೆಯಿತು.
ತೆಕ್ಕಲಕೋಟೆ ಕಂಬಾಳಿ ಮಠದ ಕಂಬಾಳಿ ಶಿವಾಚಾರ್ಯ ಸ್ವಾಮೀಜಿ 25ನೇ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿ , ‘ದೈವ ಮತ್ತು ಧರ್ಮಕ್ಕಾಗಿ ಮಾಡುವ ಸೇವೆ ಅನನ್ಯವಾದುದು. ಗುರು ಪರಂಪರೆಯನ್ನು ಗೌರವಿಸುವುದೂ ಸಹ ಶ್ರೇಷ್ಠ ಭಕ್ತಿ ಆಗಿದೆ’ ಎಂದರು.
ಪಟ್ಟಣಶೆಟ್ಟಿ ವೀಕ್ಷ ಮತ್ತು ವಿಂಧ್ಯಾ ಕುಟುಂಬದವರು ಕಾರ್ಯಕ್ರಮ ನಡೆಸಿ ಕೊಟ್ಟರು.
ಮುಖಂಡರಾದ ಜಿಎಂಜಿ ವೀರೇಶಪ್ಪ, ಜ್ಞಾನಾನಂದ ಸ್ವಾಮಿ, ಯತೇಶಪ್ಪ, ಜಡೆ ಶಿವರುದ್ರಪ್ಪ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ಬಿ.ಕೆ ಚಂದ್ರಶೇಖರ, ಕೆ ಅಮರೇಶ, ಜಿ. ಚಂದ್ರಶೇಖರ, ಸಿ. ವಿಶ್ವನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.