ಬಳ್ಳಾರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪಥಸಂಚಲನವು ಭಾನುವಾರ ನಗರದಲ್ಲಿ ವೈಭವಯುತವಾಗಿ ಜರುಗಿತು. ಗಣವೇಷ ಧರಿಸಿ ಪಥ ಸಂಚಲನ ನಡೆಸಿದ ನೂರಾರು ಕಾರ್ಯಕರ್ತರು, ಮಕ್ಕಳು ಗಮನ ಸೆಳೆದರು.
ಆರ್‌ಎಸ್‌ಎಸ್ ಸ್ಥಾಪನೆಗೊಂಡು 100 ವರ್ಷಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ಗಣವೇಷಧಾರಿಗಳ ಪಥಸಂಚಲನ ನಡೆಯಿತು.
ಪಥಸಂಚಲನದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ‘ಸಂಘ ಶತಮಾನೋತ್ಸವ ಸಂಭ್ರದಲ್ಲಿದೆ. ಅದಕ್ಕಾಗಿ ನಾವು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದೆವು’ ಎಂದು ಹೇಳಿದರು.
ನಗರದ ಪವನ್ ಹೋಟೆಲ್ ಹಿಂಭಾಗದಿಂದ ಆರಂಭವಾದಿ ಪಥ ಸಂಚಲನವು ಶ್ರೀರಾಂಪುರ ಕಾಲೊನಿಯ ಮುಖ್ಯ ರಸ್ತೆ, ರೂಪನಗುಡಿ ರಸ್ತೆ, ಕಣೇಕಲ್ಲು ಬಸ್ ನಿಲ್ದಾಣ, ರಾಘವೇಂದ್ರ ಟಾಕೀಸ್ ರಸ್ತೆ, ಅಂಗಡಿ ಮಾರಪ್ಪ ಕಾಂಪೌಂಡ್ ಮಾರ್ಗವಾಗಿ ಸಂಚರಿಸಿತು.
ಯುವಕರು, ಹಿರಿಯರು, ಚಿಕ್ಕ ಮಕ್ಕಳೂ ಉತ್ಸಾಹದಿಂದ ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ಪಥ ಸಂಚಲನಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ, ಪಾಲಿಕೆ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.