ADVERTISEMENT

ಕಂಪ್ಲಿ: ಭತ್ತದ ಸಸಿ ನಾಟಿ ಮಾಡಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:44 IST
Last Updated 1 ಜುಲೈ 2025, 13:44 IST
ಕಂಪ್ಲಿ ತಾಲ್ಲೂಕು ನಂ.1 ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ರೈತ ಪ್ರಸಾದ್‍ಗೌಡರ ಗದ್ದೆಯಲ್ಲಿ ಮಂಗಳವಾರ ಭತ್ತದ ಸಸಿ ನಾಟಿ ಮಾಡಿದರು 
ಕಂಪ್ಲಿ ತಾಲ್ಲೂಕು ನಂ.1 ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ರೈತ ಪ್ರಸಾದ್‍ಗೌಡರ ಗದ್ದೆಯಲ್ಲಿ ಮಂಗಳವಾರ ಭತ್ತದ ಸಸಿ ನಾಟಿ ಮಾಡಿದರು    

ಕಂಪ್ಲಿ: ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ ಎಂಬ ಪರಿಕಲ್ಪನೆ ಅಡಿ ಸರ್ಕಾರಿ ಶಾಲೆ ಮಕ್ಕಳು ಪ್ರಾಯೋಗಿಕವಾಗಿ ಭತ್ತದ ಸಸಿ ನಾಟಿ ಮಾಡಿ ಸಾಕ್ಷಿಯಾದರು.

ತಾಲ್ಲೂಕಿನ ನಂ.1 ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡಿಸುವ ಮೂಲಕ ಮಂಗಳವಾರ ಕೃಷಿ ಶಿಕ್ಷಣ ನೀಡಲಾಯಿತು.

‘ಗದ್ದೆಯಲ್ಲಿ ಇಳಿದು ಸಸಿ ನಾಟಿ ಮಾಡಿರುವುದು ನಮಗೆ ವಿಶೇಷ ಅನುಭವ ನೀಡಿದೆ. ಕೃಷಿಯಲ್ಲಿ ಕೆಲಸ ಮಾಡುವ ರೈತರ ಪರಿಶ್ರಮವನ್ನು ಶಿಕ್ಷಕರು ನಮಗೆ ತಿಳಿಸಿ ಕೊಟ್ಟಿದ್ದಾರೆ. ಗದ್ದೆಯಲ್ಲಿ ನಾವೆಲ್ಲರೂ ಖುಷಿಯಿಂದ ಭತ್ತದ ಸಸಿಗಳನ್ನು ನೆಟ್ಟಿದ್ದೇವೆ. ಇದರಿಂದ ರೈತರು ಎಷ್ಟು ಕಷ್ಟಪಡುತ್ತಾರೆ ಎಂಬುದು ಅರಿವಿಗೆ ಬಂದಿದೆ’ ಎಂದು ವಿದ್ಯಾರ್ಥಿಗಳಾದ ಕೆ. ಶಾರದಾ, ಕೆ. ವೀರೇಶ, ಹುಲಿಹೈದರ ಬಾರಿಮ್‍ಸಾಬ್, ಕೀರ್ತನಾ ಅನುಭವ ಹಂಚಿಕೊಂಡರು.

ADVERTISEMENT

ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ, ಶಿಕ್ಷಕರಾದ ಎಂ.ಆರ್. ಸಾವಿತ್ರಿ, ಈ. ಸುಧಾ, ಬಸವರಾಜ, ಸಂತೋಷಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.