ADVERTISEMENT

ಉಭಯ ಜಿಲ್ಲೆಗಳಲ್ಲಿ ಕುಸಿದ ತಾಪಮಾನ: ತೀವ್ರ ಚಳಿಯ ಅನುಭವ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:31 IST
Last Updated 17 ನವೆಂಬರ್ 2025, 5:31 IST
<div class="paragraphs"><p>ತಾಪಮಾನ</p></div>

ತಾಪಮಾನ

   

ಬಳ್ಳಾರಿ: ಉಭಯ ಜಿಲ್ಲೆಗಳಲ್ಲಿ ತಾಪಮಾನ ನಿರಂತರವಾಗಿ ಕುಸಿತವಾಗುತ್ತಿದ್ದು, ನವೆಂಬರ್‌ ಕಳೆಯುವುದಕ್ಕೂ ಮೊದಲೇ ತೀವ್ರ ಚಳಿಯ ಅನುಭವ ಆರಂಭವಾಗಿದೆ. 

ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆಯ 24 ಗಂಟೆಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 14.8 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. 

ADVERTISEMENT

ವಾರದಿಂದ ಹಿಂದೆಯೇ 15 ಡಿಗ್ರಿಯಷ್ಟು ತಾಪಮಾನ ಎರಡೂ ಜಿಲ್ಲೆಗಳಲ್ಲೂ ಇತ್ತು. ಆದರೆ, ನವೆಂಬರ್‌ 11, 12, 13ರಂದು ಸ್ವಲ್ಪ ಸುಧಾರಣೆಗೊಂಡು 17ರಿಂದ 18 ಡಿಗ್ರಿ ಸೆಲ್ಸಿಯಸ್‌ವರೆಗೆ ಇತ್ತು.  14ರಿಂದ ತಾಪಮಾನದಲ್ಲಿ ಮತ್ತೆ ಕುಸಿತ ಆರಂಭವಾಗಿದೆ. ಬಳ್ಳಾರಿಯಲ್ಲಿ 15 ಡಿಗ್ರಿ ಸೆಲ್ಸಿಯಸ್‌ಯಷ್ಟು ತಾಪಮಾನ ದಾಖಲಾಗುತ್ತಿದ್ದರೆ, ವಿಜಯನಗರ ಜಿಲ್ಲೆಯಲ್ಲಿ 14 ಡಿಗ್ರಿ ಸೆಲ್ಸಿಯಸ್‌ಯಷ್ಟು ತಾಪಮಾನ ವರದಿಯಾಗುತ್ತಿದೆ.

ತಾಪಮಾನ ಕುಸಿತದ ಪರಿಣಾಮವಾಗಿ ಈಗಾಗಲೇ ನಸುಕಿನಲ್ಲಿ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಿದೆ. ಮುಂದೆ ಸಾಗುವ ವಾಹನಗಳೂ ಕಾಣದಂತಹ ಸ್ಥಿತಿಯಿದೆ. 

‘ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ ಚಳಿಯ ತೀವ್ರತೆ ಹೆಚ್ಚಲಿದ್ದು, ಕನಿಷ್ಠ ಉಷ್ಣಾಂಶ ಮತ್ತಷ್ಟು ಇಳಿಯುವ ಸಾಧ್ಯತೆಯಿದೆ. ಮಾರ್ಚ್ ಮೊದಲ ವಾರದವರೆಗೂ ಚಳಿ ಇರುವ ಸಂಭವವಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೂರ್ಯ ಮೇಲೇರಿದಂತೆಲ್ಲ ತಾಪಮಾನವೂ ಏರಿಕೆಯೂ ಆಗುತ್ತಿದೆ. ಬಳ್ಳಾರಿಯಲ್ಲಿ ಗರಿಷ್ಠ 29ರಿಂದ–31.1 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ಬೆಳಿಗ್ಗೆ ಚಳಿ, ಮಧ್ಯಾಹ್ನ ಉರಿ ಬಿಸಿಲಿನ ವಾತಾವರಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.