ADVERTISEMENT

‘ಪ್ರವಾಸದಿಂದ ಜ್ಞಾನ ವಿಸ್ತರಣೆ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 13:47 IST
Last Updated 27 ಸೆಪ್ಟೆಂಬರ್ 2019, 13:47 IST
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಎಸ್.ವೈ.ಸೋಮಶೇಖರ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಎಸ್.ವೈ.ಸೋಮಶೇಖರ್ ಮಾತನಾಡಿದರು   

ಹೊಸಪೇಟೆ: ‘ಪ್ರವಾಸ ಕೈಗೊಳ್ಳುವುದರಿಂದ ಪ್ರಾಪಂಚಿಕ ಜ್ಞಾನ ವಿಸ್ತಾರವಾಗುತ್ತದೆ. ಜತೆಗೆ ಜೀವನದಲ್ಲಿ ಹೊಸ ಉಲ್ಲಾಸ, ಚೈತನ್ಯ ಬರುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಎಸ್.ವೈ.ಸೋಮಶೇಖರ್ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿಶ್ವ ಪ್ರವಾಸೋದ್ಯಮ ದಿನದ ನಿಮಿತ್ತ ಹಮ್ಮಿಕೊಂಡಿದ್ದ ‘ಕರ್ನಾಟಕದ ಪ್ರವಾಸಿ ತಾಣಗಳು’ ಕುರಿತು ಉಪನ್ಯಾಸ ನೀಡಿದರು.

‘ಪ್ರವಾಸ ಕೈಗೊಳ್ಳುವುದರಿಂದ ವಿವಿಧ ಪ್ರದೇಶಗಳ ಭಿನ್ನ ರೀತಿಯ ಸಂಸ್ಕೃತಿ, ಸಮುದಾಯಗಳ ಪರಿಚಯವಾಗುವುದು. ಆ ಪ್ರದೇಶದ ಜನರ ಸಂಪ್ರದಾಯ, ಆಚರಣೆ, ಆಚಾರ-ವಿಚಾರ, ಪದ್ಧತಿಗಳ ಕುರಿತಂತೆ ಹೊಸ ಅನುಭವಗಳಾಗುತ್ತವೆ’ ಎಂದರು.

ADVERTISEMENT

ವಸ್ತು ಸಂಗ್ರಹಾಲಯದ ನಿರ್ದೇಶಕ ವಾಸುದೇವ ಬಡಿಗೇರ, ‘ಭಾರತೀಯ ಪ್ರವಾಸೋದ್ಯಮವು ತನ್ನದೆ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಕರ್ನಾಟಕವು ಇದಕ್ಕೆ ಹೊರತಾಗಿಲ್ಲ. ನಮ್ಮ ರಾಜ್ಯವು ಸಹ ಅನೇಕ ಜನಪ್ರಿಯ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಹಂಪಿ ದೇಶದಲ್ಲಿರುವ ಒಂದು ಸುಂದರ ಬಯಲು ವಸ್ತುಸಂಗ್ರಹಾಲಯ’ ಎಂದು ತಿಳಿಸಿದರು.

ಶಾಸನಶಾಸ್ತ್ರ ವಿಭಾಗದ ಪ್ರೊ. ಅಮರೇಶ್ ಯತಗಲ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಸಿ.ವಾಸುದೇವನ್, ಸಂಶೋಧನಾ ವಿದ್ಯಾರ್ಥಿಗಳಾದ ರಾಜೇಶ್ವರಿ, ಶ್ವೇತಾ, ಫಕೀರಪ್ಪ ಇದ್ದರು.

ಡಾ.ಎಸ್.ವೈ.ಸೋಮಶೇಖರ್ ಅವರು ಕರ್ನಾಟಕದ ಪ್ರವಾಸಿ ತಾಣಗಳು ಕುರಿತ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ವಾಸುದೇವ ಬಡಿಗೇರ ಅವರು ಮತ್ತು ಶಾಸನಶಾಸ್ತ್ರ ವಿಭಾಗದ ಡಾ.ಅಮರೇಶ ಯತಗಲ್ ಅವರು. ವಸ್ತುಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ವಾಸುದೇವ ಬಡಿಗೇರ ಅವರು ಪ್ರಾಸ್ತಾವಿಕ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.