ADVERTISEMENT

ಮತ್ತಷ್ಟು ಹೆಚ್ಚಿದ ತುಂಗಭದ್ರಾ ಒಳಹರಿವು

ಯಾವುದೇ ಕ್ಷಣದಲ್ಲಿ ನದಿಗೆ ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:27 IST
Last Updated 5 ಸೆಪ್ಟೆಂಬರ್ 2019, 12:27 IST
ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹಿನ್ನೀರಿನ ಗುಂಡಾ ಸಸ್ಯ ಉದ್ಯಾನದ ಕಾಂಪೌಂಡ್‌ಗೆ ಅಲೆಗಳು ಅಪ್ಪಳಿಸುತ್ತಿರುವುದು–ಪ್ರಜಾವಾಣಿ ಚಿತ್ರ
ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹಿನ್ನೀರಿನ ಗುಂಡಾ ಸಸ್ಯ ಉದ್ಯಾನದ ಕಾಂಪೌಂಡ್‌ಗೆ ಅಲೆಗಳು ಅಪ್ಪಳಿಸುತ್ತಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಗುರುವಾರ ಮತ್ತಷ್ಟು ಹೆಚ್ಚಾಗಿದೆ.

ಬುಧವಾರ 12ಕ್ರಸ್ಟ್‌ ಗೇಟ್‌ಗಳನ್ನು1.5 ಅಡಿವರೆಗೆ ತೆಗೆದು 40,000 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿತ್ತು. ಗುರುವಾರ 20 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಹತ್ತು ಗೇಟ್‌ಗಳನ್ನು 2 ಅಡಿವರೆಗೆ, ಹತ್ತು ಗೇಟ್‌ಗಳನ್ನು ಒಂದು ಅಡಿ ವರೆಗೆ ಮೇಲಕ್ಕೆತ್ತಿ ನೀರು ಬಿಡಲಾಗುತ್ತಿದೆ.

ಸದ್ಯ 39,142 ಕ್ಯುಸೆಕ್‌ ಒಳಹರಿವು ಇದ್ದು, 45,710 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 11,477 ಕ್ಯುಸೆಕ್‌ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಒಟ್ಟು 133 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 100.855 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದ್ದು, 32 ಟಿ.ಎಂ.ಸಿ. ಅಡಿಗೂ ಹೆಚ್ಚು ಹೂಳು ತುಂಬಿಕೊಂಡಿದೆ. ಒಳಹರಿವು ತಗ್ಗಿದ್ದರಿಂದ ಆಗಸ್ಟ್‌ 28ರಿಂದ ಕ್ರಸ್ಟ್‌ಗೇಟ್‌ಗಳಿಂದ ನೀರು ಹರಿಸುವುದು ಸ್ಥಗಿತಗೊಳಿಸಲಾಗಿತ್ತು.

ADVERTISEMENT

‘ಶಿವಮೊಗ್ಗದ ತುಂಗಾ, ಭದ್ರಾ ಮತ್ತು ವರದಾ ಅಣೆಕಟ್ಟೆಯಿಂದ ನೀರು ಹರಿಸುತ್ತಿರುವುದು, ಜಲಾನಯನ ಪ್ರದೇಶದಲ್ಲಿ ಅಪಾರ ಮಳೆಯಾಗುತ್ತಿರುವ ಕಾರಣ ಒಳಹರಿವು ಹೆಚ್ಚಾಗಿದೆ. ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುವುದು. ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು’ ಎಂದುತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.