
ಕೊಟ್ಟೂರು: ಭಾರತ ಹುಣ್ಣಿಮೆ ಪ್ರಯುಕ್ತ ತಾಲ್ಲೂಕಿನ ಉಜ್ಜಯಿನಿ ಪೀಠದಲ್ಲಿ ಮರುಳಸಿದ್ಧೇಶ್ವರ ಸ್ವಾಮಿಯ ವಿಜಯ ಯಾತ್ರೆ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಭಾನುವಾರ ಜರುಗಿತು.
ಮರುಳಸಿದ್ಧೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಅಲಂಕರಿಸಿ ಪೀಠದ 9 ಪಾದಗಟ್ಟೆಗಳವರೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಯಾತ್ರೆ ನಡೆಯಿತು. ಹುಣ್ಣಿಮೆ ದಿನದ ಮಧ್ಯರಾತ್ರಿಯಿಂದ ಬೆಳಗಿನವರೆಗೂ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಉತ್ಸವ ನಡೆಯುತ್ತದೆ.
ವಿಜಯಯಾತ್ರೆಯು ಮಾಚನಹಳ್ಳಿ, ಬೆಳದೇರಿ, ಬೆನಕನಹಳ್ಳಿ, ಸೊಕ್ಕೆ, ಸಾಸ್ವಿಹಳ್ಳಿ, ಹಾರಕನಾಳು, ನಡುಮಾವಿನಹಳ್ಳಿ, ಕಾಳಾಪುರ ಗ್ರಾಮಗಳಲ್ಲಿನ ಪಾದಗಟ್ಟೆಗೆ ತೆರಳಿ ನಂತರ ಹುಣ್ಣಿಮೆಯ ರಾತ್ರಿ ಪೀಠಕ್ಕೆ ವಾಪಸಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.