ADVERTISEMENT

ಕನ್ನಡ ವಿ.ವಿ.ಯಲ್ಲಿ ನೀಗಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:17 IST
Last Updated 20 ಮೇ 2019, 13:17 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ಕೊರೆಸಿದ ಕೊಳವೆಬಾಯಿಯಿಂದ ನೀರು ಬರುತ್ತಿರುವುದು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ಕೊರೆಸಿದ ಕೊಳವೆಬಾಯಿಯಿಂದ ನೀರು ಬರುತ್ತಿರುವುದು   

ಹೊಸಪೇಟೆ: ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ಸೋಮವಾರ ಕೊಳವೆಬಾವಿ ಕೊರೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.

ಕೊಳವೆಬಾಯಿಯಿಂದ ನೀರು ಚಿಮ್ಮುತ್ತಿರುವುದನ್ನು ನೋಡಿದ ವಿಶ್ವವಿದ್ಯಾಲಯದ ವಸತಿ ನಿಲಯದ ವಿದ್ಯಾರ್ಥಿನಿಯರು ಖುಷಿಪಟ್ಟರು. ಈ ವೇಳೆ ಕುಲಪತಿ ಪ್ರೊ. ಸ.ಚಿ. ರಮೇಶ ಅಲ್ಲಿಯೇ ಇದ್ದರು.

‘ಕಮಲಾಪುರದ ದಾನಿಯೊಬ್ಬರ ನೆರವಿನಿಂದ ಈ ಕೊಳವೆಬಾವಿ ಕೊರೆಸಲಾಗಿದೆ. ಸದ್ಯ ನೀರಿನ ಸಮಸ್ಯೆ ನೀಗಿದೆ’ ಎಂದು ಸ.ಚಿ. ರಮೇಶ ಹೇಳಿದರು. ಬಳಿಕ ಅವರು ‘ಅನಿಕೇತನ’ ವಸತಿ ನಿಲಯಕ್ಕೆ ಭೇಟಿ ನೀಡಿ, ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಪರಿಶೀಲಿಸಿದರು. ಕೆಲಹೊತ್ತು ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.