ADVERTISEMENT

ದೇವಲಾಪುರ: ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:44 IST
Last Updated 24 ಜನವರಿ 2021, 5:44 IST
ಕಂಪ್ಲಿ ತಾಲ್ಲೂಕು ದೇವಲಾಪುರ ಗ್ರಾಮದ ಮದ್ದಿನ ಮನೆ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಶನಿವಾರ ನಸುಕಿನಲ್ಲಿ ಚಿರತೆ ಸೆರೆಯಾಗಿದೆ
ಕಂಪ್ಲಿ ತಾಲ್ಲೂಕು ದೇವಲಾಪುರ ಗ್ರಾಮದ ಮದ್ದಿನ ಮನೆ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಶನಿವಾರ ನಸುಕಿನಲ್ಲಿ ಚಿರತೆ ಸೆರೆಯಾಗಿದೆ   

ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದ ರಾಜನಮಟ್ಟಿ ಪ್ರದೇಶದ ಮದ್ದಿನ ಮನೆ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಶನಿವಾರ ನಸುಕಿನಲ್ಲಿ ಸುಮಾರು ನಾಲ್ಕು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ಕಳೆದ ಒಂದು ವಾರದಿಂದ ಗ್ರಾಮದ ಸುತ್ತಲು ಚಿರತೆ ಹಾವಳಿ ಅಧಿಕವಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೋನ್ ಅಳವಡಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆ ಚಿರತೆ ಚಲನವಲ ನವಿರುವ ಸ್ಥಳದಲ್ಲಿ ಸಿಬ್ಬಂದಿ ಬೋನ್ ಅಳವಡಿಸಿದ್ದರು.

ಚಿರತೆ ಬೋನಿಗೆ ಬಿದ್ದ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಜನತೆ ಸ್ಥಳಕ್ಕೆ ಧಾವಿಸಿ ಕುತೂಹಲದಿಂದ ವೀಕ್ಷಿಸಿದರು. ನಂತರ ಅರಣ್ಯ ಇಲಾಖೆಯವರು ಚಿರತೆಯನ್ನು ಸ್ಥಳಾಂತರಿಸಿದರು. ಗ್ರಾಮದ ಕಣಿವೆ ಮಾರೆಮ್ಮ ದೇವಸ್ಥಾನ ಮತ್ತು ಗ್ರಾಮದ ಸುತ್ತಲೂ ಇನ್ನು ಚಿರತೆಗಳಿದ್ದು, ಸೆರೆಗೆ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಇಲಾಖೆ ಮೇಲಧಿಕಾರಿಗಳನ್ನು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.