ADVERTISEMENT

ಹೊಸಪೇಟೆ: ರಾಹುಲ್‌ ಗಾಂಧಿ ಜನ್ಮದಿನದಂದು ಹುಲಿ ದತ್ತು ಪಡೆದ ಯುವ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 14:21 IST
Last Updated 19 ಜೂನ್ 2021, 14:21 IST
ಬಳ್ಳಾರಿ–ವಿಜಯನಗರ ಗ್ರಾಮೀಣ ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ಶನಿವಾರ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಬಿಳಿ ಹುಲಿ ದತ್ತು ಪಡೆದ ನಂತರ, ಪಕ್ಷದ ಮುಖಂಡರೊಂದಿಗೆ ಅದನ್ನು ವೀಕ್ಷಿಸಿದರು
ಬಳ್ಳಾರಿ–ವಿಜಯನಗರ ಗ್ರಾಮೀಣ ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ಶನಿವಾರ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಬಿಳಿ ಹುಲಿ ದತ್ತು ಪಡೆದ ನಂತರ, ಪಕ್ಷದ ಮುಖಂಡರೊಂದಿಗೆ ಅದನ್ನು ವೀಕ್ಷಿಸಿದರು   

ಹೊಸಪೇಟೆ (ವಿಜಯನಗರ): ಸಂಸದ ರಾಹುಲ್‌ ಗಾಂಧಿ ಅವರ ಜನ್ಮದಿನದ ನಿಮಿತ್ತ ಬಳ್ಳಾರಿ–ವಿಜಯನಗರ ಜಿಲ್ಲೆ ಗ್ರಾಮೀಣ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಬಿಳಿ ಹುಲಿ ದತ್ತು ಪಡೆದಿದ್ದಾರೆ.

₹1 ಲಕ್ಷ ನಗದನ್ನು ಕರ್ನಾಟಕ ರಾಜ್ಯ ಮೃಗಾಲಯದ ಪ್ರಾಧಿಕಾರಕ್ಕೆ ವರ್ಗಾಯಿಸಿ, ಹುಲಿ ದತ್ತು ಪಡೆದುಕೊಂಡಿದ್ದಾರೆ. ಶನಿವಾರ ವಾಜಪೇಯಿ ಉದ್ಯಾನಕ್ಕೆ ಭೇಟಿ ನೀಡಿ, ಬಿಳಿ ಹುಲಿ ನೋಡಿ ಬಂದಿದ್ದಾರೆ. ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಕಿರಣ್‌ಕುಮಾರ್‌, ವಲಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ವರಯ್ಯ, ಹುಲಿ ಸಂರಕ್ಷಕ ರಾಘವೇಂದ್ರ, ಯುವ ಕಾಂಗ್ರೆಸ್‌ ಮುಖಂಡರಾದ ನಾಗರಾಜ, ಪ್ರದೀಪ್‌, ಮನೋಜ್‌, ಷಣ್ಮುಖ ಇದ್ದರು.

ಜೂ. 17ರಂದು ವೆಸ್ಕೊ ಮೈನ್ಸ್‌ನ ವೀರಭದ್ರಪ್ಪ ಸಂಗಪ್ಪ ಅವರು ₹1 ಲಕ್ಷ ಪಾವತಿಸಿ ಹುಲಿ ದತ್ತು ತೆಗೆದುಕೊಂಡಿದ್ದಾರೆ. ಜೂ. 11ರಂದು ಪಾಪಿನಾಯಕನಹಳ್ಳಿಯ ಎಂ. ರಾಯದೋಟಪ್ಪ ₹30,000, ಜೂ.14ರಂದು ಎನ್‌.ಎಂ. ಶಾರದಾ ಅವರು ₹20,000 ದೇಣಿಗೆ ನೀಡಿದ್ದಾರೆ.

ADVERTISEMENT

ಜೂ.5ರಂದು ವಿಡಿಯೊ ಸಂದೇಶದ ಮೂಲಕ ನಟ, ಅರಣ್ಯ ಇಲಾಖೆಯ ಪ್ರಚಾರಿ ರಾಯಭಾರಿ ಆಗಿರುವ ದರ್ಶನ್‌ ಅವರು ಪ್ರಾಣಿಗಳನ್ನು ದತ್ತು ಪಡೆಯಬೇಕೆಂದು ಮನವಿ ಮಾಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ವಲಯದ ಜನ ಮುಂದೆ ಬಂದು ದೇಣಿಗೆ ಕೊಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.