ADVERTISEMENT

ಅಕ್ಕನ ಆದರ್ಶ ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ದೇವನಹಳ್ಳಿ: 12 ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅಪಾರ. ಇಂತಹ ಮಹಿಳೆಯ ಆದರ್ಶಗಳು ಅನುಕರಣೀಯ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ನಾವೆಲ್ಲಾ ಮತ್ತೊಮ್ಮೆ ಅಕ್ಕನ ನೆನಪು ಮಾಡಿಕೊಳ್ಳುವ ಅಗತ್ಯವಿದೆ ಎಂದು ಜೇಸಿರೇಟ್ ಭಾಗ್ಯಲಕ್ಷ್ಮಿ ಹೇಳಿದರು. 

ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರಿ ಮತ್ತು ಸ್ಪಷ್ಟತೆ ಇದ್ದಲ್ಲಿ ಸಾಧನೆ ಮಾರ್ಗ ಸುಲಭವಾಗಲಿದೆ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಜೆ.ಸಿ ತರಬೇತುದಾರ ಡಿ.ವಿ.ಶ್ರಿಕಾಂತ್ ಮಾತನಾಡಿ, ಮಹಿಳೆಯು ಸಮಾಜ ಮತ್ತು ಕುಟುಂಬದಲ್ಲಿ ಮಾನವೀಯ ಮೌಲ್ಯದ ಸಂಬಂಧಗಳನ್ನು ಬೆಸೆಯುವ ಕೊಂಡಿ ಇದ್ದಂತೆ ಎಂದು  ಬಣ್ಣಿಸಿದರು.

ಆಧುನಿಕ ಬದಲಾವಣೆಗಳ ಜೊತೆಗೆ ಮಹಿಳೆಯರು ತಮ್ಮ ಅಂತರಾಳದ ಬೌದ್ಧಿಕ ಮಟ್ಟವನ್ನೂ ಹೆಚ್ಚಿಸಿಕೊಳ್ಳಲು ಶ್ರಮಿಸಬೇಕು ಎಂದರು.

ಯೋಜನಾ ನಿರ್ದೇಶಕಿ ಶಕುಂತಲಾ, ಜೆ.ಸಿ ಅಧ್ಯಕ್ಷ ಎನ್.ರಮೆಶ್, ಜೇಸಿರೇಟ್ ಅಧ್ಯಕ್ಷೆ ಭಾಗ್ಯ, ಕಾರ್ಯದರ್ಶಿ ಮಂಜುನಾಥ್, ವಲಯ ತರಬೇತುದಾರಿಣಿ ಸುನಿತಾ, ನಿಕಟ ಪೂರ್ವ ಅಧ್ಯಕ್ಷ ವಿಜಯಕುಮಾರ್ ಜಿ.ಎ.ರವೀಂದ್ರ ಎಂ.ಆನಂದ್ ಎಸ್.ವಿ ಮಂಜುನಾಥ್ ಉಪಾಧ್ಯಕ್ಷ ಎಸ್. ಪ್ರಭುವೇದೇವ್, ಬಿ.ಶಿವಪ್ರಸಾದ್, ಎಸ್.ಆರ್.ಪಿಳ್ಳಪ್ಪ ಸಂಸ್ಥಾಪಕ ಅಧ್ಯಕ್ಷ ಪದ್ಮರಾಜ್ ಇದ್ದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.