ADVERTISEMENT

ದೊಡ್ಡಬಳ್ಳಾಪುರ: ಒಂದೇ ದಿನ 43 ಜನರಲ್ಲಿ ಕೋವಿಡ್-19 ದೃಢ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 15:17 IST
Last Updated 16 ಜುಲೈ 2020, 15:17 IST
ಕೊರೊನಾ ವೈರಸ್ (ಪ್ರಾತಿನಿಧಿಕ ಚಿತ್ರ)
ಕೊರೊನಾ ವೈರಸ್ (ಪ್ರಾತಿನಿಧಿಕ ಚಿತ್ರ)   

ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮಾಂತರದಲ್ಲಿ ಗುರುವಾರ ಒಂದೇ ದಿನ 43 ಜನರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ.

ಈ ಹಿಂದೆ ಒಂದೇ ದಿನ ಹತ್ತು ಜನರಲ್ಲಿ ಕೋವಿಡ್-19 ದೃಢ ಪಟ್ಟಿದ್ದ ಸಂಖ್ಯೆಯೇ ಹೆಚ್ಚು ಎನ್ನುವಂತಾಗಿತ್ತು. ಆದರೆ ಗುರುವಾರ ಒಂದೇ ದಿನ 43 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಪಟ್ಟಿ ಬರುತ್ತಿದ್ದಂತೆ ನಗರಸಭೆ ಸಿಬ್ಬಂದಿ ಇಡೀ ದಿನ ಸೋಂಕಿತರ ಮನೆಗಳ ಸುತ್ತ ಕಂಟೈನ್ಮೆಂಟ್ ಜೋನ್ ಮಾಡುವ ಸಲುವಾಗಿ ರಸ್ತೆಗಳಿಗೆ ಅಡ್ಡಲಾಗಿ ಕಟ್ಟಿಗೆಗಳನ್ನು ಕಟ್ಟುವುದರಲ್ಲಿ ಹಾಗೂ ಔಷಧಿ ಸಿಂಪರಣೆ ಮಾಡುವುದರಲ್ಲೇ ನಿರತರಾಗಿದ್ದರು.

43 ಜನರಲ್ಲಿ ಸೋಂಕು ಇರುವ ವರದಿ ಬರುತ್ತಿದ್ದಂತೆ ನಗರದಲ್ಲಿ ಲಾಕ್‌ಡೌನ್ ಜಾರಿಯನ್ನು ಪೊಲೀಸರು ಬಿಗಿಗೊಳಿಸಿದರು. ನಗರದ ಒಳಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನುಅಡ್ಡಲಾಗಿಟ್ಟು ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ್ದಲ್ಲದೆ ದಂಡವನ್ನು ವಿಧಿಸುತ್ತಿದ್ದ ದೃಶ್ಯ ಕಂಡುಬಂತು.

ADVERTISEMENT

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ದಿನ ನಿತ್ಯದಂತೆ ಹಣ್ಣು, ತರಕಾರಿ ವಹಿವಾಟು ನಡೆಯಿತಾದರು ಗ್ರಾಹಕರ ಸಂಖ್ಯೆಕಡಿಮೆಯಾಗಿತ್ತು. ಲಾಕ್‌ಡೌನ್‌ಇದ್ದರೂಸಹ ಬೆಳಿಗ್ಗೆ 12 ಗಂಟೆವರೆಗೂ ಅಗತ್ಯ ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ನಗರದ ದೇಶದಪೇಟೆಯಲ್ಲಿ ಒಂದೇ ಕುಟುಂಬದ 4 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಗುರುವಾರ ಸೋಂಕು ದೃಢ ಪಟ್ಟಿರುವವರಲ್ಲಿ ರೈಲ್ವೆ ನಿಲ್ದಾಣ ಸಮೀಪದ ಬಡಾವಣೆಯಲ್ಲಿ 2 ವರ್ಷದ ಮಗುವು ಸಹ ಸೇರಿದೆ. ಕೋವಿಡ್-19 ದೃಢಪಟ್ಟಿರುವ ಬಹುತೇಕ ಜನ ಈಗಾಗಲೇ ಕ್ವಾರಂಟೈನ್‌ನಲ್ಲಿಇದ್ದವರೇ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.