ADVERTISEMENT

ಮಕ್ಕಳಿಗೆ ಸೇವಾಲಾಲ್‌ ಕಥೆ ತಿಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 6:58 IST
Last Updated 16 ಫೆಬ್ರುವರಿ 2022, 6:58 IST
ದೇವನಹಳ್ಳಿಯಲ್ಲಿ ತಾಲೂಕು ಆಡಳಿತ, ಜಿಲ್ಲಾ ಬಂಜಾರ (ಲಂಬಾಣಿ) ನೌಕರರ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂತ ಸೇವಲಾಲರ 283ನೇ ಜಯಂತಿ ಆಚರಿಸಲಾಯಿತು
ದೇವನಹಳ್ಳಿಯಲ್ಲಿ ತಾಲೂಕು ಆಡಳಿತ, ಜಿಲ್ಲಾ ಬಂಜಾರ (ಲಂಬಾಣಿ) ನೌಕರರ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂತ ಸೇವಲಾಲರ 283ನೇ ಜಯಂತಿ ಆಚರಿಸಲಾಯಿತು   

ದೇವನಹಳ್ಳಿ: ‘ಸೇವಾಲಾಲ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸೇವಾಲಾಲ್ ದೈವಭಕ್ತಿಯ ಜೊತೆಗೆ ಪವಾಡ ಸೃಷ್ಟಿಸುತ್ತಿದ್ದರು. ಅವರ ಕಥೆಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸವಾಗಬೇಕು’ ಎಂದು ಸದ್ಗುರು ಸೇವಾಲಾಲ್ ಜಿಲ್ಲಾ ಬಂಜಾರ ನೌಕರರ ಸಾಂಸ್ಕೃತಿಕಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಶಿವಾಜಿ ನಾಯಕ್‌ ತಿಳಿಸಿದರು.

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ, ಸದ್ಗುರು ಸೇವಾಲಾಲ್ ಜಿಲ್ಲಾ ಬಂಜಾರ ನೌಕರರ ಸಾಂಸ್ಕೃತಿಕಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂತ ಸೇವಾಲಾಲರ 283ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಟಿಷ್‌ರಆಳ್ವಿಕೆ ಸಮಯದಲ್ಲಿ ಅರಬ್ಬಿ ಸಮುದ್ರದಲ್ಲಿಹಡಗು ಕೆಟ್ಟು ಹೋಗಿದ್ದಾಗ, ‍ಸೇವಾಲಾಲರುಚಾಕಚಕ್ಯತೆಯಿಂದ ಅದನ್ನು ದುರಸ್ತಿ ಮಾಡಿದ್ದರು. ಇದನ್ನು ಮನಗೊಂಡು ಅವರಿಗೆ ಮುತ್ತಿನಹಾರ ನೀಡಿದರು. ಅಮೆರಿಕದಲ್ಲಿ ವಾಸವಾಗಿರುವ ಸಮುದಾಯದ ಜನತೆ ನಮ್ಮಸಾಂಪ್ರದಾಯಿಕ ಉಡುಗೆಗೆ ಟ್ರೇಡ್‌ ಮಾರ್ಕ್‌ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಶಿರಸ್ತೇದಾರ್ ಭರತ್ ಮಾತನಾಡಿ, ‘ಸಂತ ಸೇವಾಲಾಲರು ಮಾರಿಯಮ್ಮ ಕೃಪೆಯಿಂದ ಇಂದಿನ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದ್ದರು. ಎಲ್ಲ ಸಮುದಾಯದವರು ನಮ್ಮವರೇ ಎಂದು ಭಾವಿಸಬೇಕು. ಕುಡಿಯುವ ನೀರನ್ನು ಹಣ ಕೊಟ್ಟು ಕೊಳ್ಳುವ ಕಾಲ ಬರುತ್ತದೆ ಎಂದು ಭವಿಷ್ಯವಾಣಿ ನುಡಿದ್ದರ ತ್ರಿಕಾಲ ಜ್ಞಾನಿ’ ಎಂದು ಅಭಿಪ್ರಾಯಪಟ್ಟರು.

ಬಂಜಾರ ಸಮಾಜದಲ್ಲಿದ್ದು, ಅಜ್ಞಾನ, ಮೌಢ್ಯ, ಮೂಢನಂಬಿಕೆ, ಕಂದಾಚಾರ, ಮೊದಲಾದ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಜ್ಞಾನದ ಅರಿವನ್ನು ಮೂಡಿಸಿ ದಾರಿದೀಪವಾಗಿದ್ದರು ಎಂದು ಹೇಳಿದರು.

ಸದ್ಗುರು ಸೇವಾಲಾಲ್ ಜಿಲ್ಲಾ ಬಂಜಾರ ನೌಕರರ ಸಾಂಸ್ಕೃತಿಕಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶೆಟ್ಟಿ ನಾಯಕ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಜಿ.ಪಂ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಕುಮಾರ್, ತಾಲ್ಲೂಕು ಭೂಮಾಪನ ಇಲಾಖೆಯ ಸರ್ವೇಯರ್ ಗಿರೀಶ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ನಾಯಕ್, ಖಜಾಂಚಿ ಪ್ರೇಮ್ ಸಿಂಗ್ ರಾಥೋಡ್, ನಿರ್ದೇಶಕ ಜಯನಾಯ್ಕ್, ಬಸವರಾಜ್ ಪವಾರ, ಹರೀಶ್ ನಾಯ್ಕ್, ಹಾಲಪ್ಪ, ನಿಖಿಲ್ ನಾಯಕ್, ಶಿಕ್ಷಕ ಗೋವಿಂದಪ್ಪ, ಬಿಇಓ ಕಚೇರಿಯ ಗಾಯಿತ್ರಿದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.