ADVERTISEMENT

ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ಒಂದು ತಿಂಗಳಿಂದ ಊಟ ಬಿಟ್ಟಿದ್ದ ಚಿರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 12:13 IST
Last Updated 21 ನವೆಂಬರ್ 2025, 12:13 IST
ಬನ್ನೇರುಘಟ್ಟ ಉದ್ಯಾನದಲ್ಲಿ ಮೃತಪಟ್ಟ ಚಿರತೆ
ಬನ್ನೇರುಘಟ್ಟ ಉದ್ಯಾನದಲ್ಲಿ ಮೃತಪಟ್ಟ ಚಿರತೆ   

ಆನೇಕಲ್: ಹೃದಯ ಮತ್ತು ಶ್ವಾಸಕೋಶ ಸಮಸ್ಯೆಯಿಂದಾಗಿ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನ ಗಂಡು ಚಿರತೆಯೊಂದು ಬುಧವಾರ ಮೃತಪಟ್ಟಿದೆ.

ಅ.30ರಿಂದ ಆಹಾರ ಸೇವನೆ ಕಡಿಮೆ ಮಾಡಿದ್ದ ಚಿರತೆ ಜ್ವರ ಮತ್ತು ದೌರ್ಬಲ್ಯದಿಂದ ಬಳಲುತ್ತಿತ್ತು. ಈ ಹಿನ್ನೆಲೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ, ಉದ್ಯಾನದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ಚಿರತೆ ತಿನ್ನುವ ಮಾಂಸದ ಊಲಕ ಔಷಧಿ ನೀಡಲಾಗುತ್ತಿತ್ತು. ನ.13ರಿಂದ ಚಿರತೆ ಊಟ ತ್ಯಜಿಸಿತು. ಶ್ವಾಸಕೋಶ ಮತ್ತು ಹೃದಯ ಸಮಸ್ಯೆ ಉಲ್ಬಣವಾಗಿ ಹೃದಯ ಬಡಿತ ಕಡಿಮೆಯಾಗಿತ್ತು.

ಚಿರತ ಒಳ ಅಂಗಗಳ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪಶು ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

2023ರಲ್ಲಿ ಚಾಮರಾಜನಗರದ ಹುಲಿ ಸಂರಕ್ಷಿತ ಪ್ರದೇಶದಿಂದ ಸಂರಕ್ಷಿಸಿ ಚಿರತೆಯನ್ನು ಬನ್ನೇರುಘಟ್ಟಕ್ಕೆ ಹಸ್ತಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.