ADVERTISEMENT

ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ ಆನೇಕಲ್‌ನ 7 ಸದಸ್ಯರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:31 IST
Last Updated 5 ಫೆಬ್ರುವರಿ 2026, 4:31 IST
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಸದಸ್ಯರಾಗಿ ಆಯ್ಕೆಯಾದರು
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಸದಸ್ಯರಾಗಿ ಆಯ್ಕೆಯಾದರು   

ಆನೇಕಲ್: ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಆಯ್ಕೆಯಾಗಿದ್ದಾರೆ.

ಹೆಬ್ಬಗೋಡಿ ನಗರಸಭೆ, ಚಂದಾಪುರ ಮತ್ತು ಜಿಗಣಿ ಪುರಸಭೆಯ ಸದಸ್ಯರು ಮತದಾರರಾಗಿದ್ದರು. ಒಟ್ಟು 77 ಮತಗಳು ಯೋಜನಾ ಸಮಿತಿಯ ಚುನಾವಣೆಯಲ್ಲಿ ಚಲಾವಣೆಯಾದ್ದವು. ಈ ಪೈಕಿ ಜಿಗಣಿ ಪುರಸಭೆ ಸದಸ್ಯ ಜಿಗಣಿ ಪುನೀತ್‌ ಅವರು 51 ಮತ ಪಡೆದು ಮೊದಲ ಸ್ಥಾನಗಳಿಸಿದರು.

ಹೆಬ್ಬಗೋಡಿ ನಗರಸಭೆಯ ಉಪಾಧ್ಯಕ್ಷೆ ಸುಜಾತಾ ಕೆ.ಪಿ.ರಾಜು, ಚಂದಾಪುರ ಪುರಸಭೆ ಸದಸ್ಯ ಉಮೇಶ್‌ ಅವರು ತಲಾ 50 ಮತ, ಎಚ್‌.ಆರ್‌.ರಮೇಶ್‌ 49 ಮತ, ಚಂದಾಪುರದ ವೆಂಕಟಸ್ವಾಮಿ 48 ಮತ, ಶ್ರೀನಿವಾಸರೆಡ್ಡಿ 47 ಮತ, ನವೀನ್‌ 46 ಮತ ಪಡೆಯುವ ಮೂಲಕ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.