ಆನೇಕಲ್: ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಉರುಳಿ ಬಿದ್ದ ಎರಡು ಕುರ್ಜುಗಳು (ತೇರು) ಅಡಿ ಸಿಲುಕಿ ಇಬ್ಬರು ಮೃತಪಟ್ಟ ಘಟನೆಯ ನಂತರ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿದೆ.
ರಾಯಸಂದ್ರ ಮತ್ತು ದೊಡ್ಡನಾಗಮಂಗಲ ಕುರ್ಜುಗಳು ಉರುಳಿ ಬಿದ್ದಿತು. ಗೊಂಬೆ ಮಾರುವ ಬಾಲಕಿ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟು, ಮಹಿಳೆ ಸೇರಿ ಐವರು ಗಾಯಗೊಂಡಿದ್ದರು.
ಲಕ್ಷ್ಮಿನಾರಾಯಣಪುರದ ಕುರ್ಜು ತಾಂತ್ರಿಕ ಕಾರಣದಿಂದ ಜಾತ್ರೆಗೆ ಬರಲಿಲ್ಲ. ಹೀಗಾಗಿ ಜಾತ್ರೆಯಲ್ಲಿ ಭಾಗವಹಿಸಬೇಕಿದ್ದ ಐದು ತೇರುಗಳ ಪೈಕಿ ಎರಡು ಮಾತ್ರ ಜಾತ್ರೆಯಲ್ಲಿ ಭಾಗವಹಿಸಿದ್ದವು. ಹೀಗಾಗಿ ಈ ಬಾರಿಯ ಜಾತ್ರೆ ತುಸು ಕಳೆ ಗುಂದಿತ್ತು.
ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣವನ್ನು ಯಶಸ್ವಿಯಾಗಿ ತಲುಪಿದ್ದ ಗಟ್ಟಹಳ್ಳಿ ಮತ್ತು ಸಂಜೀವನಗರ ಗ್ರಾಮಗಳ ಕುರ್ಜುಗಳು ಜಾತ್ರೆಯಲ್ಲಿ ಗಮನ ಸೆಳೆದವು. ಎರಡೂ ಮಂಗಳವಾರ ಸ್ವಗ್ರಾಮಗಳಿಗೆ ತೆರಳಲಿವೆ. ಇದಕ್ಕಾಗಿ ಪೊಲೀಸರು ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದಾರೆ.
ಎರಡು ತಿಂಗಳು ಸಿದ್ಧಪಡಿಸಲಾಗಿದ್ದ ದೊಡ್ಡನಾಗಮಂಗಲ ಕುರ್ಜು ಭಾರಿ ಗಾಳಿಯಿಂದ ನೆಲಕ್ಕುರುಳಿ ಬಿದ್ದ ನಂತರ 10–12 ತಾಸಿನಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಮತ್ತೇ ಅದನ್ನು ಹುಸ್ಕೂರಿನತ್ತ ಎಳೆಯಲು ಸಜ್ಜಾದಾಗ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಅನುಮತಿ ನಿರಾಕರಿಸಿದರು. ಇದರಿಂದ ಭಕ್ತರ ಉತ್ಸಾಹ
ಕುಂದಿತು.
ತೇರು ಊರಿನ ಅಸ್ಮಿತೆ:ದೊಡ್ಡ ನಾಗಮಂಗಲ ಗ್ರಾಮಸ್ಥರು ಮತ್ತು ಕೋನಪ್ಪನ ಅಗ್ರಹಾರ ಗ್ರಾಮಸ್ಥರು ಒಗ್ಗೂಡಿ ರಾತ್ರಿ 1ರ ಸುಮಾರಿಗೆ ಕೊನಪ್ಪನ ಅಗ್ರಹಾರ ಗ್ರಾಮದಿಂದ ಮತ್ತೊಂದು ತೇರನ್ನು ತಂದು ಬೆಳಗ್ಗೆ ಹತ್ತರ ಸುಮಾರಿಗೆ ತೇರನ್ನು ಪುನರ್ ಕಟ್ಟಲಾಯಿತು.
ನಮ್ಮೂರಿನ ಅಸ್ಮಿತೆ ಕಾಪಾಡುವ ಸಲುವಾಗಿ ತೇರನ್ನು ಪುನರ್ ಕಟ್ಟಲಾಯಿತು. ಆದರೆ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಅನುಮತಿ ನೀಡದ್ದರಿಂದ ಧಾರ್ಮಿಕ ಪೂಜೆಗಳನ್ನು ಸಲ್ಲಿಸಲಾಗಿದೆ ಎಂದು ದೊಡ್ಡ ನಾಗಮಂಗಲ ಗ್ರಾಮದ ರವಿತೇಜ ಅವರು ತಿಳಿಸಿದರು.
ತೇರು ಊರಿನ ಅಸ್ಮಿತೆ
ದೊಡ್ಡ ನಾಗಮಂಗಲ ಗ್ರಾಮಸ್ಥರು ಮತ್ತು ಕೋನಪ್ಪನ ಅಗ್ರಹಾರ ಗ್ರಾಮಸ್ಥರು ಒಗ್ಗೂಡಿ ರಾತ್ರಿ 1ರ ಸುಮಾರಿಗೆ ಕೊನಪ್ಪನ ಅಗ್ರಹಾರ ಗ್ರಾಮದಿಂದ ಮತ್ತೊಂದು ತೇರನ್ನು ತಂದು ಬೆಳಗ್ಗೆ ಹತ್ತರ ಸುಮಾರಿಗೆ ತೇರನ್ನು ಪುನರ್ ಕಟ್ಟಲಾಯಿತು. ನಮ್ಮೂರಿನ ಅಸ್ಮಿತೆ ಕಾಪಾಡುವ ಸಲುವಾಗಿ ತೇರನ್ನು ಪುನರ್ ಕಟ್ಟಲಾಯಿತು. ಆದರೆ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಅನುಮತಿ ನೀಡದ್ದರಿಂದ ಧಾರ್ಮಿಕ ಪೂಜೆಗಳನ್ನು ಸಲ್ಲಿಸಲಾಗಿದೆ ಎಂದು ದೊಡ್ಡ ನಾಗಮಂಗಲ ಗ್ರಾಮದ ರವಿತೇಜ ಅವರು ತಿಳಿಸಿದರು.
ಕುರ್ಜು ಎತ್ತರ ಕಡಿತ
ಹುಸ್ಕೂರು ಗ್ರಾಮದ ಸಮೀಪದಲ್ಲಿಯೇ ನಿಂತಿರುವ ಲಕ್ಷ್ಮಿನಾರಾಯಣಪುರ ಕುರ್ಜಿಗೂ ಸುರಕ್ಷತೆ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿದೆ. 160 ಅಡಿಗೂ ಹೆಚ್ಚು ಎತ್ತರದ ಗಟ್ಟಹಳ್ಳಿಯ ಕುರ್ಜು ಭಕ್ತರ ಆಕರ್ಷಣೆಯಾಗಿದೆ. ಮಂಗಳವಾರ ಎರಡು ಕುರ್ಜು ಸ್ವಗ್ರಾಮಗಳಿಗೆ ತೆರಳಲಿವೆ ಸುರಕ್ಷತೆಯ ದೃಷ್ಟಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ 160 ಅಡಿಗೂ ಹೆಚ್ಚು ಎತ್ತರದ ಗಟ್ಟಹಳ್ಳಿ ತೇರನ್ನು ಹುಸ್ಕೂರು ಮದ್ದೂರಮ್ಮ ದೇವಾಲಯದ ಬಳಿಯೇ 80 ಅಡಿಗಳವರೆಗೆ ಬಿಚ್ಚಿ ವಾಹನದ ಮೂಲಕ ಸಾಗಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹುಸ್ಕೂರು ಗ್ರಾಮದಿಂದ ಗಟ್ಟಹಳ್ಳಿ ಕೇವಲ 1.5ಕಿ.ಮೀ. ದೂರವಿದ್ದು ಜನರ ಸುರಕ್ಷತೆಯ ದೃಷ್ಟಿಯಿಂದ ಎತ್ತರ ತಗ್ಗಿಸಿ ಮರಳಿ ಗ್ರಾಮಕ್ಕೆ ಕೊಂಡೊಯ್ಯುವ ನಿರ್ಧಾರಕ್ಕೆ ಬರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.