ADVERTISEMENT

ಆನೇಕಲ್ | ಮೊದಲ ಪರೀಕ್ಷೆಗೂ ಮುನ್ನ: ದೇಗುಲದಲ್ಲಿ ವಿದ್ಯಾರ್ಥಿಗಳ ದಂಡು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:56 IST
Last Updated 1 ಮಾರ್ಚ್ 2026, 4:56 IST
ಆನೇಕಲ್‌ನ ಎಎಸ್‌ಬಿ ಕಾಲೇಜು ಮುಂಭಾಗದಲ್ಲಿ ಪರೀಕ್ಷಾ ಕೊಠಡಿ ಹುಡುಕುತ್ತಿರುವ ವಿದ್ಯಾರ್ಥಿಗಳು
ಆನೇಕಲ್‌ನ ಎಎಸ್‌ಬಿ ಕಾಲೇಜು ಮುಂಭಾಗದಲ್ಲಿ ಪರೀಕ್ಷಾ ಕೊಠಡಿ ಹುಡುಕುತ್ತಿರುವ ವಿದ್ಯಾರ್ಥಿಗಳು   

ಆನೇಕಲ್: ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಎಎಸ್‌ಬಿ ಕಾಲೇಜಿನಲ್ಲಿ ಪ್ರಥಮ ವಿಷಯ ಕನ್ನಡ ಪರೀಕ್ಷೆ ಎದುರಿಸಿರು.

ಆನೇಕಲ್‌ ಪಟ್ಟಣದ ಎಎಸ್‌ಬಿ ಮೈದಾನ ಮತ್ತು ಎಎಸ್‌ಬಿ ಕಾಲೇಜು ಆವರಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಬರೆಯುವ ವಿದ್ಯಾರ್ಥಿಗಳು ತಮ್ಮ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು. ಪೋಷಕರು ತಮ್ಮ ಮಕ್ಕಳಿಗಾಗಿ ತರಗತಿಗಳ ಆಸನದ ಸಂಖ್ಯೆಯನ್ನು ಹುಡುಕಿ ಮಕ್ಕಳಿಗೆ ಹೇಳುತ್ತಿದ್ದ ದೃಶ್ಯ ಕಂಡು ಬಂದಿತು.

ಪಿಯುಸಿ ಪಬ್ಲಿಕ್‌ ಪರೀಕ್ಷೆಯ ಹಿನ್ನೆಲೆಯಲ್ಲಿ ಪಟ್ಟಣದ ಕಂಬದ ಗಣಪತಿ ದೇವಾಲಯ, ಸ್ಕಂದ ಗಣಪತಿ ದೇವಾಲಯಗಳಲ್ಲಿ ವಿದ್ಯಾರ್ಥಿಗಳ ದಂಡು ಕಂಡು ಬಂದರು. ವಿದ್ಯಾರ್ಥಿಗಳು ತಮ್ಮ ಪೆನ್‌, ಹಾಲ್‌ಟಿಕೆಟ್‌ನ್ನು ದೇವರ ಮುಂದಿಟ್ಟು ಪೂಜಿಸುತ್ತಿದ್ದ ದೃಶ್ಯ ಕಂಡು ಬಂದಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.