ಶಿಶು (ಸಾಂದರ್ಭಿಕ ಚಿತ್ರ)
ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಗೊಲ್ಲರಗುಂಟೆಯಲ್ಲಿ ಶನಿವಾರ ಪೋಷಕರ ನಿರ್ಲಕ್ಷ್ಯದಿಂದಾಗಿ ತಾಯಿಯ ಗರ್ಭದಲ್ಲಿದ್ದ ಮೂರು ಶಿಶುಗಳು ಮೃತಪಟ್ಟಿವೆ.
ಬನ್ನೇರುಘಟ್ಟದ ಮಂಜುಳ ಆರು ತಿಂಗಳ ಗರ್ಭಿಣಿಯಾಗಿದ್ದರು. ಶನಿವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಒಂದು ಮಗು ಮೃತಪಟ್ಟಿದೆ. ತಕ್ಷಣ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಲಾಗಿದೆ. ಆದರೆ ಆನೇಕಲ್‌ಗೆ ಬರುವ ವೇಳೆಗಾಗಲೇ ಉಳಿದ ಎರಡು ಶಿಶುಗಳು ಸಹ ಸಾವನ್ನಪ್ಪಿದೆ.
ತಾಯಿ ಕಾರ್ಡ್ ಮಾಡಿಸಿದ್ದ ಮಂಜುಳ ಆರು ತಿಂಗಳಿನಿಂದ ಒಂದು ಬಾರಿಯೂ ಆಸ್ಪತ್ರೆಗೆ ಹೋಗಿರಲಿಲ್ಲ. ಆಶಾ ಕಾರ್ಯಕರ್ತರು ಮಾಹಿತಿ ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದ್ದರೂ ಮಂಜುಳ ಸಿಕ್ಕಿರಲಿಲ್ಲ ಎಂಬ ಮಾಹಿತಿ ದೊರೆತಿದೆ.
ಮೂರು ಶಿಶುಗಳಿಗೆ ಒಮ್ಮೊಮ್ಮೆ ತಾಯಿಯ ಗರ್ಭದಲ್ಲಿ ಜಾಗ ಸರಿಯಾಗಿ ದೊರೆಯದ ಕಾರಣ ಮೃತಪಟ್ಟಿರಬಹುದು. ಆದರೆ ತಾಯಿ ಒಮ್ಮೆಯೂ ಆಸ್ಪತ್ರೆಗೆ ಹೋಗದಿರುವುದೇ ಮುಖ್ಯ ಕಾರಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.