ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಗ್ರಾಮದ ಅದಿದೈವ ಚಂಪಕದಾಮಸ್ವಾಮಿ ಹಾಗೂ ಗ್ರಾಮ ದೇವತೆ ಚಂಪಕವಲ್ಲಿ ಮಾರಮ್ಮ ದೇವಿ ಉತ್ಸವ ಮೂರ್ತಿಯನ್ನು ಬನ್ನೇರುಘಟ್ಟದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದಸರಾ ಆಚರಿಸಲಾಯಿತು.
ಚಂಡೆಮದ್ದಳೆ, ನಗಾರಿ, ಮರಗಾಲು ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಕೀಲುಕುದುರೆ ಸೇರಿದಂತೆ 10ಕ್ಕೂ ಹಚ್ಚು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಬನ್ನೇರುಘಟ್ಟದ ಪ್ರಮುಖ ಬೀದಿಗಳಲ್ಲಿ ವೈಭವದ ಜಂಬೂಸವಾರಿ ನಡೆಯಿತು. ಚಂಪಕಧಾಮ ಸ್ವಾಮಿ ದೇವಾಲಯದ ಮುಂಭಾಗದ ವಿಶಾಲ ಮೈದಾನದಲ್ಲಿ ಭಕ್ತರು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಶಾಸಕ ಎಂ.ಕೃಷ್ಣಪ್ಪ, ಮುಖಂಡರಾದ ಸೋಮಶೇಖರ್, ಟಿ.ನಾರಾಯಣ್, ಜಯರಾಮ್, ಬಾಬುಸಿಂಗ್, ಮಹದೇವ್, ನಾಗರಾಜು, ಅನಿಲ್, ಲೋಕೇಶ್, ಅಪ್ಪಿ, ಸುರೇಶ್, ಮುನಿರಾಜು, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.