ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಶುಕ್ರವಾರ ಸಫಾರಿಗೆ ತೆರಳಿದ್ದ ಬಾಲಕನೊಬ್ಬನ ಕೈಯನ್ನು ಚಿರತೆಯೊಂದು ಪರಚಿ ಗಾಯಗೊಳಿಸಿದೆ.
12 ವರ್ಷ ಬಾಲಕ ಸಫಾರಿಗೆ ಕುಟುಂಬದೊಂದಿಗೆ ಬಂದಿದ್ದ. ಸಫಾರಿ ವಾಹನದಲ್ಲಿ ತೆರಳುತ್ತಿದ್ದಾಗ ಚಿರತೆಯೊಂದು ವಾಹನದ ಮೆಸ್‌ನೊಳಗೆ ಕಾಲಿಟ್ಟಿದೆ. ಬಾಲಕನ ಕೈ ಸಿಕ್ಕಿದ್ದರಿಂದ ಪರಚಿದೆ. ಇದರಿಂದ ಗಾಯವಾಗಿದ್ದು ಬಾಲಕನಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಉದ್ಯಾನದ ಮೂಲಗಳು ತಿಳಿಸಿವೆ.
ಸಫಾರಿ ವಾಹನದಲ್ಲಿ ಎಲ್ಲ ಜಾಲರಿಗಳನ್ನು ಸರಿಯಾಗಿ ಮುಚ್ಚಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜೈವಿಕ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.