ADVERTISEMENT

ಸಫಾರಿ ವಾಹನದ ಮೇಲೆ ಹುಲಿ ದಾಳಿ: ದೃಶ್ಯ ವೈರಲ್‌

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 19:56 IST
Last Updated 15 ಜನವರಿ 2021, 19:56 IST
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡುತ್ತಿರುವ ದೃಶ್ಯ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡುತ್ತಿರುವ ದೃಶ್ಯ   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೈವಿಕ ಉದ್ಯಾನದ ಹುಲಿಧಾಮಕ್ಕೆ ಸಫಾರಿ ವಾಹನ ತೆರಳಿದ ಸಂದರ್ಭದಲ್ಲಿ ಸಫಾರಿಯಲ್ಲಿನ ಬೆಂಗಾಲ್‌ ಟೈಗರ್‌ ವಾಹನದೆಡೆಗೆ ಜಿಗಿದು ಬಂಪರ್‌ನ್ನು ಕೀಳುವ ಪ್ರಯತ್ನ ನಡೆಸಿದೆ.

ಇದರಿಂದಾಗಿ ವಾಹನದಲ್ಲಿದ್ದ ಪ್ರವಾಸಿಗರು ಭಯಗೊಂಡಿದ್ದಾರೆ. ಕೆಲಕಾಲ ಆತಂಕ ಉಂಟಾಗಿತ್ತು. ಜೀಪಿನ ಹಿಂಭಾಗದ ಬಂಪರ್‌ನ್ನು ಕಚ್ಚಿ ಕಿತ್ತುಹಾಕುವ ಪ್ರಯತ್ನ ಮಾಡಿತು.

ADVERTISEMENT

ಮತ್ತೊಂದು ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಕೆಲವೊಮ್ಮೆ ಹುಲಿಗಳು ಕೋಪಗೊಂಡಾಗ ಈ ರೀತಿ ವರ್ತಿಸುತ್ತವೆ ಎಂದು ಉದ್ಯಾನದ ಮೂಲಗಳು ತಿಳಿಸಿವೆ.

ಈ ದೃಶ್ಯ ಕೆಲ ತಿಂಗಳುಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.