ADVERTISEMENT

ಡಿ.30ರಂದು ಬನ್ನೇರುಘಟ್ಟ ಉದ್ಯಾನ ಬಂದ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:51 IST
Last Updated 12 ಡಿಸೆಂಬರ್ 2025, 2:51 IST
ಬನ್ನೇರುಘಟ್ಟ ಜೈವಿಕ ಉದ್ಯಾನ(ಸಾಂದರ್ಭಿಕ ಚಿತ್ರ)
ಬನ್ನೇರುಘಟ್ಟ ಜೈವಿಕ ಉದ್ಯಾನ(ಸಾಂದರ್ಭಿಕ ಚಿತ್ರ)   

ಆನೇಕಲ್: ಮಂಗಳವಾರ ರಜೆ ದಿನವಾಗಿದ್ದರೂ ಹೊಸ ವರ್ಷದ ಪ್ರಯುಕ್ತ ಡಿ.30ರಂದು ಬನ್ನೇರುಘಟ್ಟ ಜೈವಿಕ ಉದ್ಯಾನ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ಹೊಸ ವರ್ಷದ ನಿಮಿತ್ತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ರಜೆ ದಿನವಾದರೂ ಡಿ.30ರಂದು ಉದ್ಯಾನ ಪ್ರವಾಸಿಗರಿಗೆ ತೆರೆದಿರುತ್ತದೆ. 

ಸಫಾರಿ, ಮೃಗಾಲಯ, ಚಿಟ್ಟೆ ಉದ್ಯಾನಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯಬಹುದು ಎಂದು  ಉದ್ಯಾನದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT