
ಪ್ರಜಾವಾಣಿ ವಾರ್ತೆ
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಎರಡು ಗಂಡು ಹುಲಿ ಮರಿಗಳನ್ನು ಪ್ರೆಸ್ಟೀಜ್ ಗ್ರೂಪ್ ಸಂಸ್ಥೆ ಶುಕ್ರವಾರ ದತ್ತು ಪಡೆಯಿತು.
ದತ್ತು ಪಡೆದ ಹುಲಿ ಮರಿಗಳಿಗೆ ಸಿಂಬ ಮತ್ತು ಶೇರು ಎಂದು ನಾಮಕಾರಣ ಮಾಡಲಾಗಿದೆ. ಪರಿಸರ ಸಮತೋಲನ ಮತ್ತು ಜೀವ ವೈವಿಧ್ಯ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಬನ್ನೇರುಘಟ್ಟ ಉದ್ಯಾನದೊಂದಿಗೆ ಕಂಪನಿಯು ಕೈಜೋಡಿಸಿದೆ ಎಂದು ಉದ್ಯಾನದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹುಲಿಗಳ ದತ್ತು ಸ್ವೀಕಾರದಿಂದಾಗಿ ಐದು ವರ್ಷ ಅವಧಿಗೆ ಮರಿಗಳ ಪೋಷಣೆ, ಪಶು ವೈದ್ಯಕೀಯ ಆರೈಕೆ ಒಳಗೊಂಡಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.