ADVERTISEMENT

Bengaluru Airport: ₹16 ಕೋಟಿ ಗಾಂಜಾ ವಶ, ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 23:55 IST
Last Updated 10 ಫೆಬ್ರುವರಿ 2026, 23:55 IST
<div class="paragraphs"><p>ಬಂಧನ</p></div>

ಬಂಧನ

   

ದೇವನಹಳ್ಳಿ: ಬ್ಯಾಂಕಾಕ್‌ ಮತ್ತು ಥಾಯ್ಲೆಂಡ್‌ನಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹16.21 ಕೋಟಿ ಮೌಲ್ಯದ ಹೈಡ್ರೊಫೋನಿಕ್‌ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ.   

ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳಲ್ಲಿ ಸಾಗಿಸುತ್ತಿದ್ದ ₹8.31 ಕೋಟಿ ಮೌಲ್ಯದ 23.76 ಕೆ.ಜಿ ಹೈಡ್ರೊಫೋನಿಕ್‌ ಗಾಂಜಾ ಪತ್ತೆಯಾಗಿದೆ. 

ADVERTISEMENT

ಮತ್ತೊಂದು ಪ್ರಕರಣದಲ್ಲಿ ಥಾಯ್ಲೆಂಡ್‌ನಿಂದ ಬಂದಿಳಿದ ಮತ್ತೊಬ್ಬ ಪ್ರಯಾಣಿಕ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ₹3.70 ಕೋಟಿ ಮೌಲ್ಯದ 10.58 ಕೆ.ಜಿ ಗಾಂಜಾ ಮರೆಮಾಚಿ ಕಳ್ಳಸಾಗಣೆ ಮಾಡುತ್ತಿದ್ದಾಗ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ.

ಬ್ಯಾಂಕಾಕ್‌ನಿಂದ ಮಂಗಳವಾರ ಬಂದ ಮತ್ತೊಬ್ಬ ಪ್ರಯಾಣಿಕನಿಂದ ₹4.20 ಕೋಟಿ ಮೌಲ್ಯದ 12 ಕೆ.ಜಿ ಹೈಡ್ರೊಫೋನಿಕ್‌ ಗಾಂಜಾ ವಶಪಡಿಸಿಕೊಂಡು, ಪ್ರಯಾಣಿಕನನ್ನು ಬಂಧಿಸಲಾಗಿದೆ.

ಬಂಧಿತರ ವಿರುದ್ಧ ಮಾದಕ ವಸ್ತುಗಳ ನಿಷೇಧ ಕಾಯ್ದೆ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ  ಮುಂದುವರಿದಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.