ADVERTISEMENT

ಕೆರೆಗಿಳಿದು ಟಿಸಿ ಫ್ಯೂಸ್‌ ತೆಗೆದ BESCOM ಲೈನ್‌ಮನ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 7:09 IST
Last Updated 22 ನವೆಂಬರ್ 2021, 7:09 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಕೆರೆ ಅಂಗಳದಲ್ಲಿನ ವಿದ್ಯುತ್‌ ಪರಿವರ್ತಕದಿಂದ ಫ್ಯೂಸ್‌ ತೆಗೆಯುತ್ತಿರುವ ಲೈನ್‌ಮನ್‌ ನೂತನ್‌ ಪ್ರಸಾದ್
ದೊಡ್ಡಬಳ್ಳಾಪುರ ತಾಲ್ಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಕೆರೆ ಅಂಗಳದಲ್ಲಿನ ವಿದ್ಯುತ್‌ ಪರಿವರ್ತಕದಿಂದ ಫ್ಯೂಸ್‌ ತೆಗೆಯುತ್ತಿರುವ ಲೈನ್‌ಮನ್‌ ನೂತನ್‌ ಪ್ರಸಾದ್   

ದೊಡ್ಡಬಳ್ಳಾಪುರ:ಲೈನ್‌ಮನ್‌ವೊಬ್ಬರು ತುಂಬಿದ ಕೆರೆಯ ಮಧ್ಯೆ ಇದ್ದ ಜೋಡಿ ವಿದ್ಯುತ್ ಕಂಬದ ಎಲ್.ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್‌ನಿಂದ ಫ್ಯೂಸ್ ತೆಗೆದು ಮುಂದಾಗಬಹುದಾಗಿದ್ದ ಅವಘಡ ತಪ್ಪಿಸಿದ್ದಾರೆ.

ಅರೇಹಳ್ಳಿಗುಡ್ಡದಹಳ್ಳಿ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಗಾಗಿ ಕೆರೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿತ್ತು. ಆದರೆ, ನಿರಂತರ ಮಳೆಯಿಂದ ಕೆರೆ ತುಂಬಿದೆ.

ಕೆರೆಯಲ್ಲಿ ನೀರಿನಮಟ್ಟ ಹೆಚ್ಚಾಗುತ್ತಿದಂತೆ ಎಲ್.ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್ ಮುಳುಗುವ ಹಂತದಲ್ಲಿತ್ತು. ಒಂದು ವೇಳೆ ಬಾಕ್ಸ್ ಮುಳುಗಿದ್ದರೆ ಬಹುದೊಡ್ಡ ಅನಾಹುತಕ್ಕೆ
ಕಾರಣವಾಗುತ್ತಿತ್ತು.

ADVERTISEMENT

ಈ ಗಂಭೀರತೆ ಅರಿತ ಲೈನ್‌ಮನ್‌ ನೂತನ್‌ ಪ್ರಸಾದ್ ನೀರಿನಿಂದ ಆವೃತವಾಗಿದ್ದ ವಿದ್ಯುತ್‌ ಪರಿವರ್ತಕದ ಬಳಿಗೆ ತೆರಳಿ ಪ್ಲಾಸ್ಟಿಕ್ ಪೈಪ್ ಮೂಲಕ ಡೋಲೊ ಫ್ಯೂಸ್‌ ತೆಗೆದು
ಹಾಕಿದ್ದಾರೆ.

ಇದರಿಂದ ಸಂಭವಿಸಬಹುದಾದ ಅವಘಡ ತಪ್ಪಿಸಿದ ಸಿಬ್ಬಂದಿಯ ಕಾರ್ಯಕ್ಕೆ ಬೆಸ್ಕಾಂ ನಗರ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ರೋಹಿತ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.