ಹೊಸಕೋಟೆ: ತಾಲ್ಲೂಕಿನ ಉಪ್ಪಾರಹಳ್ಳಿಯ ಕಾಟೇರಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅಮ್ಮನವರ ಗರ್ಭಗುಡಿಗೆ ಪ್ರವೇಶ ಮತ್ತು ಪಾದ ಸ್ಪರ್ಶಕ್ಕೆ ನೂರಾರು ಭಕ್ತರು ಮುಗಿಬಿದ್ದರು.
ಭೀಮನ ಅಮಾವಾಸ್ಯೆಯಂದು ಪ್ರತಿ ವರ್ಷವೂ ಈ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ದೇವರ ಸ್ಪರ್ಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಕಳೆದ ವರ್ಷ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ದರ್ಶನ ಪಡೆದಿದ್ದರು. ಆದರೆ ಈ ವರ್ಷ ಈಗಾಗಲೇ ಮಧ್ಯಾಹ್ನದ ವೇಳೆಗೆ 50 ಸಾವಿರ ಮಂದಿ ಭಕ್ತರು ಅಮ್ಮನ ದರ್ಶನವನ್ನು ಪಡೆದುಕೊಂಡಿದ್ದಾರೆ ಎಂದು ದೇವಾಲಯದ ದರ್ಮದರ್ಶಿ ಧನಂಜಯ್ ತಿಳಿಸಿದರು.
ನೆರೆದಿದ್ದ ಭಕ್ತರಿಗೆ ಬೆಳಗಿನಿಂದ ಸಂಜೆಯವರೆಗೂ ಅನ್ನದಾನ ವ್ಯವಸ್ಥೆ ಸಹ ಮಾಡಲಾಗಿತ್ತು ಎಂದು ದೇವಾಲಯ ಸಮಿತಿಯ ಕಾರ್ಯದರ್ಶಿ ವೆಂಕಟಾಚಲಪತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.