ADVERTISEMENT

ಮಕ್ಕಳ ಕೈಗೆಟುಕುವ ವಿದ್ಯುತ್ ವೈರ್‌ ತೆರವು

ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 19:45 IST
Last Updated 26 ಆಗಸ್ಟ್ 2019, 19:45 IST
ವಿಜಯಪುರದ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಕೈಗೆಟಕುವ ಹಂತದಲ್ಲಿದ್ದ ವೈರುಗಳನ್ನು ಬೆಸ್ಕಾಂ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು
ವಿಜಯಪುರದ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಕೈಗೆಟಕುವ ಹಂತದಲ್ಲಿದ್ದ ವೈರುಗಳನ್ನು ಬೆಸ್ಕಾಂ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು   

ವಿಜಯಪುರ: ಇಲ್ಲಿನ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ (ಜಿ.ಕೆ.ಬಿ.ಎಂ.ಎಸ್.)ಯ ಆವರಣದಲ್ಲಿ ವಿದ್ಯುತ್ ವೈರ್‌ಗಳನ್ನು ಸರಿಪಡಿಸುವಂತೆ ಆ.24 ರಂದು ಪ್ರಜಾವಾಣಿ ಯಲ್ಲಿ ’ವಿದ್ಯುತ್ ವೈರ್ ತೆರವುಗೊಳಿಸಿ’ ಎಂಬ ತಲೆಬರಹದಡಿ ವರದಿ ಪ್ರಕಟಗೊಂಡಿದ್ದ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಸೋಮವಾರ ಶಾಲೆಯ ಆವರಣದಲ್ಲಿ ಕಾರ್ಯಾಚರಣೆ ಕೈಗೊಂಡರು.

ಕೈಗೆಟಕುವ ಹಂತದಲ್ಲಿದ್ದ ವೈರ್‌ ತೆರವುಗೊಳಿಸಿದ್ದು ತಂತಿಗಳ ಬಳಿಯಿದ್ದ ಮರದ ಕೊಂಬೆಗಳನ್ನೂ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ರಾಜ್ಯದಲ್ಲಿ ಹಲವೆಡೆ ವಿದ್ಯುತ್ ಅವಘಡಗಳಿಂದಾಗಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಆವರಣದಲ್ಲಿ ಲೋಕಸಭಾ ಚುನಾವಣೆಯ ವೇಳೆ ಅಳವಡಿಸಿಕೊಂಡಿದ್ದ ವಿದ್ಯುತ್ ತಂತಿಗಳನ್ನು ಮಕ್ಕಳ ಕೈಗೆಟಕುವ ಹಂತದಲ್ಲಿ ಬಿಟ್ಟಿರುವ ಬಗ್ಗೆ ವರದಿ ಪ್ರಕಟಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.