ADVERTISEMENT

ಆನೇಕಲ್: ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:25 IST
Last Updated 25 ಡಿಸೆಂಬರ್ 2025, 6:25 IST
<div class="paragraphs"><p>ಕ್ರಿಸ್‌ಮಸ್‌ಗೆ ಸಿದ್ಧವಾದ ಆನೇಕಲ್‌ ಸಂತ ಜೋಸೆಫರ ಚರ್ಚ್‌</p></div>

ಕ್ರಿಸ್‌ಮಸ್‌ಗೆ ಸಿದ್ಧವಾದ ಆನೇಕಲ್‌ ಸಂತ ಜೋಸೆಫರ ಚರ್ಚ್‌

   

ಆನೇಕಲ್: ಪಟ್ಟಣದ ಚರ್ಚ್‌ಗಳಲ್ಲಿ ಹಾಗೂ ಮನೆಗಳಲ್ಲಿ ಗುರುವಾರ ನಸುಕಿನ ಜಾವದಿಂದ ಕ್ರಿಸ್ಮಮಸ್‌ ಹಬ್ಬ ಕಳೆಗಟ್ಟಿತು. ಚರ್ಚ್‌ಗಲ್ಲಿ ಹಲವು ಧಾರ್ಮಿಕ ಕೈಂಕರ್ಯಗಳು ರಾತ್ರಿ 12ರಿಂದ ಆರಂಭಗೊಂಡವು.

ಹಬ್ಬದ ಪ್ರಯುಕ್ತ ಚರ್ಚ್‌ನಲ್ಲಿ ಸ್ಥಾಪಿಸಿರುವ ಏಸುಕ್ರಿಸ್ತನ ಜನ್ಮ ವೃತಾಂತ ತಿಳಿಸುವ ಮಾದರಿಗಳು ಗಮನ ಸೆಳೆಯುತ್ತಿವೆ. ಚರ್ಚ್‌ನ ಸುತ್ತಮುತ್ತಲ ರಸ್ತೆಗಳು ವಿದ್ಯುತ್‌ ಅಲಂಕಾರದಿಂದ ಕಂಗೊಳಿಸುತ್ತಿದೆ.

ADVERTISEMENT

ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಗೋದಲಿಗಳನ್ನು ಸ್ಥಾಪಿಸಿ ಕ್ರಿಸ್ತನ ಜನ್ಮ ವೃತಾಂತವನ್ನು ತಿಳಿಸುವ ಗೊಂಬೆಗಳನ್ನು ಕೂರಿಸಲಾಗಿದೆ. ಮನೆಗಳ ಆವರಣವನ್ನು ಕ್ರಿಸ್‌ಮಸ್‌ ಟ್ರೀ, ಬಣ್ಣದ ತಳಿರು ತೋರಣ, ಬಲೂನ್‌ನಿಂದ ಸಿಂಗಾರ ಮಾಡಲಾಗಿದೆ. ಕೇಕ್‌ ಸೇರಿದಂತೆ ಸಿಹಿ ತಿನಿಸುಗಳನ್ನು ತಯಾರಿಸಲಾಗಿದೆ.

ಪಟ್ಟಣದ ಸಂತ ಜೋಸೆಪ್ರಾ ಚರ್ಚಿನಲ್ಲಿ ಕ್ರಿಸ್‌ಮಸ್‌ ಹಬ್ಬದ ಆಚರಣೆಗೆ ಬರದ ಸಿದ್ಧತೆ ನಡೆದಿದ್ದು, ಗುರುವಾರ ನಸುಕಿನ ಜಾವದಿಂದ ಹಬ್ಬ ಆರಂಭವಾಗಲಿದೆ.

ಪಟ್ಟಣದ ಸಂತ ಜೋಸೆಫ್ ಅವರ ಚರ್ಚ್‌ನಲ್ಲಿ ಗುರುವಾರ ಕ್ರಿಸ್‌ಮಸ್‌ ಆಚರಣೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಚರ್ಚ್‌ಗೆ ಆಕರ್ಷಕ ದೀಪಲಂಕಾರ ಮಾಡಲಾಗಿದೆ. ಚರ್ಚ್‌ನ ಎರಡು ಕಡೆಗಳಲ್ಲಿ ಗೋದಲಿ ಸ್ಥಾಪಿಸಿ ಯೇಸುಕ್ರಿಸ್ತನ ಜನ್ಮ ವೃತ್ತಾಂತ ಸಾರಲಾಗುತ್ತಿದೆ. ಬುಧವಾರ ಕಡೆಯ ಸುತ್ತಿನ ಸಿದ್ಧತೆ ಮುಗಿದ್ದು, ಚರ್ಚ್‌ ಹಬ್ಬದ ಸಂಭ್ರಮಕ್ಕೆ ಸ‌ಜ್ಜಾಗಿದೆ. ಚರ್ಚ್‌ನ ಸುತ್ತಮುತ್ತಲ ರಸ್ತೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು ವಿದ್ಯುತ್ ದೀಪಲಂಕಾರಗಳು ಕಣ್ಮನ ಸೆಳೆಯುತ್ತಿದೆ.

ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಬುದುವಾರ ರಾತ್ರಿ 11ರ ನಂತರ ಬಲಿ ಪೂಜೆ ಆಯೋಜಿಸಲಾಗಿದೆ. ಕ್ರಿಸ್ತರ ಆಗಮನವನ್ನು ಮಹೋನ್ನತ ಗೀತೆಗಳ ಮೂಲಕ ಬರಮಾಡಿಕೊಳ್ಳಲಾಗುವುದು. ಆನೇಕಲ್ ಸಂತ ಜೋಸೆಫ್ರ ಚರ್ಚ್‌ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಗುರುವಾರ ರಾತ್ರಿ ಎರಡರಿಂದ ಮೂರು ಸಾವಿರ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಚರ್ಚ್‌ಗೆ ಆಗಮಿಸುವ ಸಾರ್ವಜನಿಕರಿಗೆ ಕೇಕ್ ವಿತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಆನೇಕಲ್ ಚರ್ಚ್‌ನ ಫಾದರ್ ಶಾಂತರಾಜ್ ಥಾಮಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.