ADVERTISEMENT

ದೊಡ್ಡಬಳ್ಳಾಪುರ: ಸಾಮೂಹಿಕ ಸೂರ್ಯ ನಮಸ್ಕಾರ

ಪ್ರಭುದೇವ ಯೋಗ ಕೇಂದ್ರದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 4:58 IST
Last Updated 29 ಜನವರಿ 2023, 4:58 IST
ದೊಡ್ಡಬಳ್ಳಾಪುರದ ಪ್ರಭುದೇವ ಯೋಗ ಕೇಂದ್ರದಿಂದ ರಥಸಪ್ತಮಿ ಅಂಗವಾಗಿ ಶನಿವಾರ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು
ದೊಡ್ಡಬಳ್ಳಾಪುರದ ಪ್ರಭುದೇವ ಯೋಗ ಕೇಂದ್ರದಿಂದ ರಥಸಪ್ತಮಿ ಅಂಗವಾಗಿ ಶನಿವಾರ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು   

ದೊಡ್ಡಬಳ್ಳಾಪುರ: ನಗರದ ವಿವಿಧ ಯೋಗ ಕೇಂದ್ರಗಳಲ್ಲಿ ರಥಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಮುಖ್ಯರಸ್ತೆಯ ವೈಕುಂಠ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಪ್ರಭುದೇವ ಯೋಗ ಕೇಂದ್ರದಿಂದ 108 ಬಾರಿ ಸೂರ್ಯ ನಮಸ್ಕಾರ ಕಾರ್ಯಕ್ರಮವು ಯೋಗ ಶಿಕ್ಷಕ ಪಿ.ಕೆ. ಶ್ರೀನಿವಾಸ್ ನೇತೃತ್ವದಲ್ಲಿ
ನಡೆಯಿತು.

ಯೋಗ ಶಿಕ್ಷಕ ಬಿ.ಎಲ್. ಸೀತಾರಾಂ ಮಾತನಾಡಿ, ಸೂರ್ಯನಿಲ್ಲದೆ ಜೀವನದ ಅಸ್ತಿತ್ವ ಇರಲು ಸಾಧ್ಯವಿಲ್ಲ. ರಥಸಪ್ತಮಿ ದಿನದಂದು ಸೂರ್ಯನ ಪೂಜೆಯೇ ಮುಖ್ಯ ಆಚರಣೆಯಾಗಿದೆ ಎಂದರು.

ADVERTISEMENT

ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಲಿದೆ. ನೇಸರನನ್ನು ಪೂಜಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಿಯಮಿತ ಪೌಷ್ಟಿಕ ಆಹಾರ, ಯೋಗ, ಧ್ಯಾನದ ಮೂಲಕ ನಮ್ಮ ದೇಹವನ್ನು ರೋಗಗಳಿಂದ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಯೋಗದಲ್ಲಿ ಸೂರ್ಯ ನಮಸ್ಕಾರ ಪ್ರಮುಖವಾದುದು. ಇದರಿಂದ ಹಲವಾರು ಉಪಯೋಗಗಳಿವೆ. ಉತ್ತಮ ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರವನ್ನು ನಿತ್ಯ ಮಾಡುವುದು ಉತ್ತಮ ಎಂದು ಸಲಹೆ
ನೀಡಿದರು.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗ ಶಿಕ್ಷಕ ಬಸಪ್ಪ ನೇತೃತ್ವದಡಿ ನಗರದ ಮುಖ್ಯರಸ್ತೆಯ ಬಸವಣ್ಣ ದೇವಾಲಯದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.