ADVERTISEMENT

ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಿ ರಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 6:36 IST
Last Updated 13 ಡಿಸೆಂಬರ್ 2020, 6:36 IST
ಗ್ರಾಮಾಂತರ ಜಿಲ್ಲಾ ಒಕ್ಕಲಿಗರ ನೂತನ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು
ಗ್ರಾಮಾಂತರ ಜಿಲ್ಲಾ ಒಕ್ಕಲಿಗರ ನೂತನ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು   

ದೇವನಹಳ್ಳಿ: ರಾಜ್ಯದಲ್ಲಿ ಹರಿದು ಹಂಚಿಹೋಗಿರುವ ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಲು ರಾಜ್ಯ ಮಟ್ಟದ ಒಕ್ಕೂಟ ಅಸ್ತಿತ್ವಕ್ಕೆ ತರಲಾಗಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯ ಘಟಕ ಅಧ‍್ಯಕ್ಷ ನಾಗಣ್ಣ ಬಾಣಸವಾಡಿ ಹೇಳಿದರು.

ಗ್ರಾಮಾಂತರ ಜಿಲ್ಲಾ ನೂತನ ಒಕ್ಕೂಟದ ಅಧ್ಯಕ್ಷರ ಆಯ್ಕೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತ
ನಾಡಿದರು. ಒಕ್ಕಲಿಗ ಸಮುದಾಯದಲ್ಲಿ ಜಾತಿ ಗಣತಿ ವೇಳೆ ಉಪಜಾತಿಗಳನ್ನು ನೋಂದಾಯಿಸಿದರ ಫಲವಾಗಿ ರಾಜ್ಯಮಟ್ಟದಲ್ಲಿ ಬಹುಸಂಖ್ಯಾತರಾಗಿದ್ದ ಒಕ್ಕಲಿಗರು ಮೂರನೇ ಸ್ಥಾನಕ್ಕೆ ಸಿಮೀತಗೊಂಡಿದ್ದಾರೆ. ಹಲವು ವರ್ಷಗಳಿಂದ ಅಸ್ತಿತ್ವದಲ್ಲಿರುವ ರಾಜ್ಯ ಒಕ್ಕಲಿಗರ ಸಂಘ ಬರೀ ಆಡಳಿತಕ್ಕೆ ಸೀಮಿತವಾಗಿದ್ದರೂ ಆ ಸಂಘಕ್ಕೆ ಪರ್ಯಾಯವಾಗಿ ರಾಜ್ಯ ಒಕ್ಕೂಟ ಅಸ್ತಿತ್ವಕ್ಕೆ ತಂದಿಲ್ಲ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘ ಆರೇಳು ಜಿಲ್ಲೆಗೆ ಸೀಮಿತವಾಗಿದೆ. ಪ್ರಸ್ತುತ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಒಕ್ಕಲಿಗರ ಒಕ್ಕೂಟ ರಾಜ್ಯದ 30 ಜಿಲ್ಲೆ ಮತ್ತು ತಾಲ್ಲೂಕಿಗೆ ವಿಸ್ತರಿಸಲು ಈಗಾಗಲೇ ರಾಜದಾದ್ಯಂತ ಪ್ರವಾಸ ಮಾಡಲಾಗಿದೆ. ಒಕ್ಕಲಿಗರ ಸಂಘ ಸ್ಥಳೀಯವಾಗಿ ನೂರಾರು ಇದ್ದರೂ ರಾಜ್ಯಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಒಕ್ಕೂಟ ರಚನೆಯಾಗಲಿದೆ. ಇದಕ್ಕೆ ಸಮುದಾಯದ ಮಠಾಧೀಶರು, ಒಕ್ಕಲಿಗ ಸಂಘದ ಕೆಲ ಪದಾಧಿಕಾರಿಗಳ ಬೆಂಬಲವಿದೆ ಎಂದು ಅವರು ಹೇಳಿದರು.

ADVERTISEMENT

ಬಿಜೆಪಿ ಸರ್ಕಾರ ಒಕ್ಕಲಿಗ ಸಮುದಾಯವನ್ನು ಇಬ್ಭಾಗ ಮಾಡುವ ಹುನ್ನಾರ ನಡೆಸುತ್ತಿದೆ. ಈಚೆಗೆ ಶಿರಾ ಉಪಚುನಾವಣೆಯಲ್ಲಿ ಕುಂಚಿಟಿಗರನ್ನು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇಬ್ಭಾಗ ಮಾಡಿದೆ ಎಂದು ದೂರಿದರು.

ಜಾತಿಗೊಂದು, ಭಾಷೆಗೊಂದು ಪ್ರಾಧಿಕಾರ ರಚನೆ ಮಾಡುತ್ತಿರುವ ಸರ್ಕಾರದಲ್ಲಿ ಆಡಳಿತಕ್ಕೆ ಬೆಲೆ ಇಲ್ಲವಾಗಿದೆ. ಒಕ್ಕಲಿಗರ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ಹಕ್ಕೋ ತ್ತಾಯ ಮಾಡಲಾಗಿದೆ ಎಂದು ಹೇಳಿದರು.

ಒಕ್ಕೂಟ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ.ನಂಜೇಗೌಡ, ಕಾರ್ಯಾಧ್ಯಕ್ಷ ಮಧುಸೂಧನ್‍ರನ್ನು ಅಭಿನಂಧಿಸಿಲಾಯಿತು, ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಗೂ ವಿವಿಧ ಜಿಲ್ಲಾ ಘಟಕದ ಪದಾಧಿಕಾರಿಗಳು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.