ADVERTISEMENT

ಅನೈತಿಕ ಸಂಬಂಧ; ಗಾರೆ ಮೇಸ್ತ್ರಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 15:49 IST
Last Updated 17 ಆಗಸ್ಟ್ 2023, 15:49 IST
ದಿಲೀಪ್
ದಿಲೀಪ್   

ಆನೇಕಲ್ :  ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಬೇಗಿಹಳ್ಳಿ ವಸುಂದರ ಬಡಾವಣೆಯಲ್ಲಿ ಗುರುವಾರ ವ್ಯಕ್ತಿಯೊಬ್ಬರ ಕೊಲೆ ಆಗಿದೆ.

ತಮಿಳುನಾಡು ಮೂಲದ ಗಾರೆ ಮೇಸ್ತ್ರಿ ದಿಲೀಪ್‌ (27) ಎಂದು ಕೊಲೆಯಾದ ವ್ಯಕ್ತಿ.

ಕಟ್ಟಡ ನಿರ್ಮಾಣದ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ದಿಲೀಪ್‌, ಕೆಲಸಗಾರ ರಾಯಚೂರು ಮೂಲದ ಹೊನ್ನಪ್ಪ ಎಂಬುವವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ADVERTISEMENT

ಗುರುವಾರ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ದಿಲೀಪ್‌ ಮತ್ತು ಹೊನ್ನಪ್ಪನ ಪತ್ನಿ ಇರುವುದನ್ನು ಕಂಡು ಕುಪಿತಗೊಂಡ ಹೊನ್ನಪ್ಪ ದೊಣ್ಣೆಯಿಂದ ಗಾರೆ ಮೇಸ್ತ್ರಿ ದಿಲೀಪ್‌ನ ತಲೆ ಹೊಡೆದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ದಿಲೀಪ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಮೃತಪಟ್ಟಿದ್ದಾರೆ ಎಂದು ಬನ್ನೇರುಘಟ್ಟ ಸರ್ಕಲ್‌ ಇನ್‌ಸ್ಪೆಕ್ಟರ್‌ ಉಮಾಮಹೇಶ್‌ ತಿಳಿಸಿದರು.

ಹೊನ್ನಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.