ADVERTISEMENT

ದಾಬಸ್‌ಪೇಟೆ: ಅಪಘಾತದಲ್ಲಿ ಡಾನ್ಸ್ ಮಾಸ್ಟರ್ ಸುಧೀಂದ್ರ ಸಾವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 11:32 IST
Last Updated 4 ನವೆಂಬರ್ 2025, 11:32 IST
   

ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿ–48ರ ದಾಬಸ್‌ಪೇಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಪೆಮ್ಮನಹಳ್ಳಿ ಮೇಲ್ಸೇತುವೆ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಶ್ಯಾಮ್ ಡಾನ್ಸ್‌ ಸ್ಕೂಲ್‌ನ ಡಾನ್ಸ್ ಮಾಸ್ಟರ್ ಸುಧೀಂದ್ರ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ.

ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ದೊಡ್ಡಬಳ್ಳಾಪುರ ಕಡೆಯಿಂದ ದಾಬಸ್‌ಪೇಟೆಗೆ ಬರುವಾಗ ಮೇಲ್ಸೇತುವೆಯ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ಸ್ನೇಹಿತರ ಜೊತೆ ಮಾತಾನಾಡುತ್ತಿದ್ದರು. ಬಳಿಕ ಸ್ನೇಹಿತರು ಕಾರಿನಲ್ಲಿ ಮುಂದೆ ಹೋಗಿದ್ದರು. ಸುಧೀಂದ್ರ ಅವರು ಕಾರು ಹತ್ತಲು ಹೋಗುವಾಗ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಕ್ಯಾಂಟರ್‌ ಜಪ್ತಿ ಮಾಡಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.