ADVERTISEMENT

ದೇವನಹಳ್ಳಿ | ಪ್ರಯಾಣಿಕನ ಬ್ಯಾಗ್‌ನಲ್ಲಿ 234 ಪ್ರಾಣಿಗಳು!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 16:42 IST
Last Updated 22 ಆಗಸ್ಟ್ 2023, 16:42 IST
ಊಸರವಳ್ಳಿ
ಊಸರವಳ್ಳಿ   

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬ್ಯಾಂಕಾಂಕ್‌ನಿಂದ ಪ್ರಯಾಣಿಕರೊಬ್ಬರು ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ ಕಾಂಗರೂ ಮರಿ ಸೇರಿದಂತೆ 234 ಕಾಡು ಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಸೋಮವಾರ ತಡರಾತ್ರಿ ಥಾಯ್ ಏರ್‌ ವೇಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನ ಬ್ಯಾಗ್‌ ಪರೀಕ್ಷಿಸಿದಾಗ ನಾನಾ ಬಗೆಯ ಹೆಬ್ಬಾವು, ಊರಸವಳ್ಳಿ, ಆಮೆಗಳು ಸೇರಿದಂತೆ ವಿವಿಧ ಜಾತಿಯ ಕಾಡು ಪ್ರಾಣಿಗಳು ಇದ್ದವು. ಎಲ್ಲ ಪ್ರಾಣಿಗಳನ್ನೂ ರಕ್ಷಣೆ ಮಾಡಲಾಗಿದೆ.

ವಿಮಾನ ನಿಲ್ದಾಣದ ಗ್ರೀನ್ ಲೈನ್ ದಾಟಿ ಅದಾಗಲೇ ನಿರ್ಗಮನ ದ್ವಾರ ಬಳಿ ಬಂದಿದ್ದ ಪ್ರಯಾಣಿಕನ ಚಲನವಲನಗಳ ಬಗ್ಗೆ ಶಂಕಿತಗೊಂಡ ಕಸ್ಟಮ್ಸ್ ಅಧಿಕಾರಿಗಳು ಎರಡು ಟ್ರಾಲಿ ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ಅನೇಕ ಪ್ಲಾಸ್ಟಿಕ್‌ ಡಬ್ಬಿ ಮತ್ತು ಚೀಲಗಳಲ್ಲಿ ಪ್ರಾಣಿಗಳನ್ನು ತಂದಿದ್ದ. ಕೆಲವು ಪ್ರಾಣಿಗಳು ಅಳಿವಿನಂಚಿಗೆ ಸೇರಿವೆ ಎಂದು ತಿಳಿದು ಬಂದಿದೆ. 

ADVERTISEMENT

ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಕಸ್ಟಮ್ಸ್ ಹಾಗೂ ವನ್ಯಜೀವಿಗಳ ಕಳ್ಳಸಾಗಣೆ ತಡೆ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

ವಿವಿಧ ಜಾತಿಯ ಹೆಬ್ಬಾವುಗಳು
ಕಾಂಗರೂ ಮರಿ
ಮೊಸಳೆ ಮರಿ
ಅಮೆಗಳು
ಆಮೆಗಳು
ಆಮೆಗಳು
ಚೀಲದಲ್ಲಿ ತಂದಿರುವ ಊಸರವಳ್ಳಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.